ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ
ಬೆಳಗಾವಿ.
ಮುಗಳಖೋಡ: ಹನುಮ ಜಯಂತಿಯ ಪ್ರಯುಕ್ತ ಪಟ್ಟಣದ ಗೊರನಳ್ಳ ಶ್ರೀ ಹನುಮಾನ ದೇವಸ್ಥಾನದಲ್ಲಿ (ಏ.12) ಶನಿವಾರದಂದು ಮುಂಜಾನೆ ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ ನಡೆಯಿತು.
ಮುಂಜಾನೆ 6ಗಂಟೆಗೆ ಶ್ರೀ ಹನುಮಾನ ದೇವರ ಮೂರ್ತಿ ಮತ್ತು ನವಗ್ರಹ ಕಟ್ಟಡದ ಅಡಿಗಲ್ಲುಗೆ ವಿಶೇಷ ಪೂಜೆ ಹಾಗೂ ಮಹಾ ರುದ್ರಾಭೀಷೆಕ, ನಾಮಾವಳಿ ಮತ್ತು ಮಂಗಳಾರುತಿ ಕಾರ್ಯಕ್ರಮವು ನಡೆಯಿತು.
ಸಾಯಂಕಾಲ ಪಟ್ಟಣದ ತಾಯಂದಿರರು ಶ್ರೀ ಹನುಮ ದೇವರ ಮೂರ್ತಿಯನ್ನಿಟ್ಟು ತೊಟ್ಟಿಲು ತೂಗಿ, ಜೋಗುಳ ಹಾಡಿ ತೋಟ್ಟಿಲೋತ್ಸವ ಮಾಡಿದರು.
ಬಳಿಕ ಮಕ್ಕಳ ಫಲವಾಗಿ ಮುತೈದೆಯರಿಗೆ ಉಡಿತುಂಬಲಾಯಿತು.
ಕಾರ್ಯಕ್ಕೆ ಬಂದ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಮಠದ ಅರ್ಚಕ ಚನ್ನಬಸಯ್ಯ ಹಿರೇಮಠ , ದೇವಸ್ಥಾನದ ಪೂಜಾರಿ ತುಕಾರಾಂ ಗುರವ, ಅಡಿವೇಶ ಕಾಜಿಬಿಳಗಿ, ಪುಟ್ಟು ಯಡವನ್ನವರ, ರಾಜು ಯಡವನ್ನವರ, ಸುಕುಮಾರ ಬಾಬಣ್ಣವರ, ರವಿ ಹುಬ್ಬಳ್ಳಿ, ಶ್ರೀಶೈಲ ಯಡವನ್ನವರ, ವಸಂತ ಮುದೋಳ, ಭೀಮಪ್ಪ ಯಡವನ್ನವರ, ರಮೇಶ ಗುರವ, ಅಶ್ವತ ಯಡವನ್ನವರ, ಸುನಿಲ ಗುರವ, ಹನಮಂತ ಹೊಸಟ್ಟಿ, ಬಸವರಾಜ ಯಡವನ್ನವರ, ಸಿದ್ದು ನಬಾಪೂರ, ಅಪ್ಪಾಸಾಬ ಯಡವನ್ನರ, ಸಾತು ಹುಲ್ಲೊಳಿ, ಲಕ್ಷ್ಮಣ ಹಳ್ಳೂರ, ಮುತ್ತು ಕುಲಿಗೋಡ, ಅಪ್ಪಾಸಾಬ ಬಾಬಣ್ಣವರ ಹಾಗೂ ತಾಯಂದಿರು ಇದ್ದರು.
*ವರದಿ: ಸಂತೋಷ ಮುಗಳಿ*