ಬೆಳಗಾವಿ.
ರಾಯಬಾಗ ತಾಲೂಕಾ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜರುಗಿದವು.
ಇನ್ನುವರೆಗೆ ಸಂಘದ ಇತಿಹಾಸದಲ್ಲೇ ಮಹಿಳೆಯರಿಗೆ ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ಅವಕಾಶ ನೀಡಿರಲಿಲ್ಲ. ಬೀರಪ್ಪ ಮುತ್ತೂರ ಅವರು ಬೆಂಬಲಿತ ಗುರು ಸ್ಪಂದನ ಬಳಗ ಮೊದಲ ಬಾರಿಗೆ ಮಹಿಳೆಗೆ ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಮೊದಲು ಬಾರಿಗೆ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಕುಡಚಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರೇಶ್ಮಾ ಸಲಾವುದಿನ ಪಟೇಲ ಸಾಮಾನ್ಯ ಅಭ್ಯರ್ಥಿಗಳಲ್ಲಿ ಎರಡನೆ ಅತಿ ಹೆಚ್ಚು 366 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿ ಇತಿಹಾಸ ನಿರ್ಮಿಸುವ ಮೂಲಕ ತಮ್ಮ ಗುರು ಸ್ಪಂದನ ಪೆನಲಗೆ ಬಲ ನೀಡಿದ್ದಾರೆ.
