ಬೆಳಗಾವಿ.
ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಕವಿ ಎಂ.ಕೆ.ಶೇಖ್ ರವರ ಕವನ ಸಂಕಲನ “ಅಪ್ಪನ ಹೆಗಲು ಅಮ್ಮನ ಮಡಿಲು” ಕೃತಿಗೆ ಚಿಕ್ಕೋಡಿಯ ವಡಗೋಲದ ಸಾಹಿತ್ಯ ಸೌರಭ ಫೌಂಡೇಶನ್ (ರಿ) ಇವರು ಕೊಡಮಾಡುವ 2025ನೇ ಸಾಲಿನ “ಶಿಭಾ ಕಾವ್ಯ ಪುರಸ್ಕಾರ” ಸಂದಿದೆ.
ಇದೇ ಮೇ ೧ರಂದು ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.