ಬೆಳಗಾವಿ. ಕುಡಚಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಡಚಿ ಶಾಸಕಕರಾಗಿ ಆಯ್ಕೆಯಾದ ಮಹೇಂದ್ರ ತಮ್ಮಣ್ಣವರ ಅವರಿಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ
ಕಟ್ಟಡ ನಿರ್ಮಾಣ, ರಸ್ತೆ, ಚರಂಡಿ, ಕುಡಿಯುವ ನೀರು, ಹಕ್ಕು ಪತ್ರ ವಿತರಣೆ, ಮಂಂದಿರ, ಮಸೀದಿ ಹಾಗೂ ಗ್ರಾಮೀಣ ಭಾಗದಲ್ಲಿ ಇರುವಂತಹ ಬಡವರ ದಿನ ದಲಿತರ, ಕೂಲಿ ಕಾರ್ಮಿಕರ, ಕಷ್ಟ ಕಾಲದಲ್ಲಿ ಇರುವಂತಹ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಮುಂಜೂರು ಮಾಡಿಕೊಂಡು ಸರ್ವಾಂಗೀಣ ಅಭಿವೃದ್ಧಿ ಕಾರ್ಯದಲ್ಲಿ ಶಾಸಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪತ್ರಕರ್ತರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಕುಂದು ಕೊರತೆಗಳ ಸುದ್ದಿ ಮಾಡದೆ ವ್ಯಾಪ್ತಿ ಬಿಟ್ಟು ಬೇರೆ ಗ್ರಾಮಗಳ ಗುತ್ತಿಗೆದಾರರ ಜೀವ ಹಿಂಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಶಾಸಕರು ತಮ್ಮ ಕ್ಷೇತ್ರಕ್ಕೆ ಬೇಕಾದಷ್ಟು ಅನುದಾನವನ್ನು ತರುವಲ್ಲಿ ತಮ್ಮ ಪ್ರಯತ್ನ ಮೀರಿ ಕೆಲಸ ಮಾಡುತ್ತಿದ್ದಾರೆ ಅದು ಕ್ಷೇತ್ರಕ್ಕೂ ಒಳ್ಳೇದೇ
ಆದರೆ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಹೇಳಿ 10-20 ಪತ್ರಕರ್ತ ಬಾಬಾಗಳು ಅವತ್ತು ಶಾಸಕರ ಗುದ್ದಲಿ ಪೂಜಾ ಕಾರ್ಯಕ್ರದಲ್ಲಿ ಹಾಜರ್ ಆಗಿ ಗುತ್ತಿಗೆದಾರರಿಗೆ ಕಂಠಕವಾಗುತ್ತಿದ್ದಾರೆ.
ಯೂಟ್ಯೂಬ್ & ಪತ್ರಿಕಾ ವರದಿಗಾರ ಹಾವಳಿಗೆ ಬೇಸತ್ತು ಹೋದ ಗುತ್ತಿಗೆದಾರ:
ಇನ್ನೊಂದೆಡೆ ಕುಡಚಿ ಮತಕ್ಷೇತ್ರದಲ್ಲಿ ಯಾವುದೇ ಕಾಮಗಾರಿಗಳು ಪ್ರಾರಂಭವಾದರೆ ಸಾಕು ಕೆಲವೊಂದಿಷ್ಟು ಪತ್ರಕರ್ತರು, ಯೂಟ್ಯೂಬ್ ನ್ಯೂಸ್ ಚಾನೆಲ್ ಪತ್ರಕರ್ತರು, ಸೇರಿ ಕುಡಚಿ ಮತಕ್ಷೇತ್ರದಲ್ಲಿ ಶಾಸಕರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾದರೆ ಸಾಕು ಅಲ್ಲಿ ಹಜರ್ ಇದ್ದೆ ಇರುತ್ತಾರೆ.
ವ್ಯಾಪ್ತಿಗೂ ಮೀರಿ ಪತ್ರಕರ್ತರ ಹಾವಳಿ ನಿಯಂತ್ರಣ ಯಾವಾಗ?
ಕ್ಷೇತ್ರ ಮೀರಿ ಸಂಚಾರ : ದಿನ ಪತ್ರಿಕೆಯ ವರದಿಗಾರರು ಒಂದೇ ಸ್ಥಳಕ್ಕೆ ಸೀಮಿತಗೋಳಗಾಗದೆ ಗುಂಪು ಕಟ್ಟಿಕೊಂಡು ಮತಕ್ಷೇತ್ರದ ತುಂಬೆಲ್ಲ ಸಂಚಾರ
ಇಡೀ ಕ್ಷೇತ್ರದಲ್ಲಿ ಸಂಚರಿಸಿ ಕುಡಚಿ ಮತಕ್ಷೇತ್ರದಲ್ಲಿ ಬರುವ ಎಲ್ಲಾ ಶಾಸಕರ ಕಾಮಗಾರಿಗಳು ನಡೆಯುವಂತ ಸಮಯದಲ್ಲಿ ಕಾಮಗಾರಿಗಳನ್ನು ಪಡೆದಂತಹ ಗುತ್ತಿಗೆದಾರರನ್ನು ಟಾರ್ಗೆಟ್ ಮಾಡಿ ಹ*ಣ ಕ್ಕೆ ಬೇಡಿಕೆ ಇಟ್ಟು ಅವರನ್ನು ತೇಜೋವದೆ ಮಾಡುವಂತ ಪ್ರಯತ್ನ ಜೋರಾಗಿ ನಡೆಯುತ್ತಿದೆ ಎಂದು ಬಹಳ ಗಂಭೀರ ಆರೋಪ ಕ್ಷೇತ್ರ ದಲ್ಲಿ ಕೇಳಿ ಬರುತ್ತಿದೆ
ಗುತ್ತಿಗೆದಾರ : ಇನ್ನು ಕಾಮಗಾರಿ ಪ್ರಾರಂಭವಾಗದೆನೇ ಇರುವಾಗ ಕೆಲವು ಪತ್ರಕರ್ತರು ಹಗಲು ರಾತ್ರಿ ಎನ್ನದೆ ಫೋನ್ ಸಂಪರ್ಕ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ನಮ್ಮನ್ನು ತೇಜೋವದೆ ಮಾಡುತಿದ್ದಾರೆ ಕೋಟ್ಯಂತರ ರೂಪಾಯಿಗಳ ಬಂಡವಾಳ ತೊಡಗಿಸಿ ನಾವು ಕಾಮಗಾರಿಗಳನ್ನು ಮಾಡುವುದು ಹೇಗೆ ಎಂದು ಗುತ್ತಿಗೆದಾರರು ಗೋಳು ತೋಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಮತಕ್ಷೇತ್ರದ ಜನಪ್ರತಿನಿದಿನಗಳು ಇಂತಹ ಬೆಳವಣಿಗೆಯತ್ತ ಗಮನ ಹರಿಸಿ, ಕಿರಿಕ್ ಮಾಡುತ್ತಿರುವ ಪತ್ರಕರ್ತರಿಗೆ ಕಡಿವಾಣ ಹಾಕಬೇಕಾಗಿದೆ.
ವರದಿ :ಕೆ ಎಸ್ ಕಾಂಬ್ಳೆ. ರಾಯಬಾಗ





