ಕುಡಚಿ.
ರಾಯಬಾಗ ತಾಲೂಕಿನ ಕುಡಚಿ ವಿಧಾನಸಭಾ ಮತಕ್ಷೇತ್ರದ ದೇವಾಪೂರಟ್ಟಿ, ಸವಸುದ್ದಿ, ಇಟ್ನಾಳ, ಖನದಾಳ, ಅಳಗವಾಡಿ, ಮೊರಬ, ಯಬರಟ್ಟಿ ಹಾಗೂ ಕೋಳಿಗುಡ್ಡ ಗ್ರಾಮಗಳಲ್ಲಿ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಯಡಿಯಲ್ಲಿ ಅಂದಾಜು 2.5 ಕೋಟಿ ಮೊತ್ತದ ಅನುದಾನದ ಅಡಿಯಲ್ಲಿ ಸಿ.ಸಿ. ರಸ್ತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಇಟ್ನಾಳ ಗ್ರಾಮದ ಮುಖಂಡ ಆದಿ ಜಾಂಬವ ರಾಜ್ಯ ಉಪಾಧ್ಯಕ್ಷ ರವಿ ಮಾದರ, ಬಾಳಪ್ಪ ಮಾದರ ಹಾಗೂ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ತೊರೆದು ಶಾಸಕ ಮಹೇಂದ್ರ ತಮ್ಮಣ್ಣವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾಗೂ ಶಲ್ಯ ಸ್ವೀಕರಿಸುವ ಮೂಲಕ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಮುತ್ತಪ್ಪ ಡಾಂಗೆ, ಪರಮಾನಂದ ಬೆಳಗಲಿ, ವಿಠಲ ಬಿದರಿ, ಶಂಕರ ಮೂಡಲಗಿ, ಗಜಾನನ ಜಂಬಗಿ, ವರ್ಧಮಾನ. ಶಿರಹಟ್ಟಿ, ಯಬರಟ್ಟಿ ಗ್ರಾಪಂ ಅಧ್ಯಕ್ಷ ನಿಜಗೌಡ ಪಾಟೀಲ, ಮಹೇಶ ಒಡೆಯರ, ಆನಂದ ಮೊಳೆ, ಕಲ್ಮೇಶ್ವರ ಕಾಂಬಳೆ, ಮುತಾಲೀಕ ಮುರಗಣ್ಣವರ, ಸತ್ಯಪ್ಪ ಗಾಣಿಗೇರ, ಗೌಡಪ್ಪ ಗಾಣಿಗೇರ, ತಮ್ಮನಗೌಡ ಪಾಟೀಲ, ಕಾಡು ಗಾಣಿಗೇರ, ಶಫೀಕ್ ಕೊರಬು, ಶಂಬು ನಂದಿ ಇತರರು ಉಪಸ್ಥಿತರಿದ್ದರು.

ವರದಿ :ಕೆ ಎಸ್ ಕಾಂಬ್ಳೆ





