ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜೈನ ಬಸದಿ ಹತ್ತಿರ ಕರ್ನಾಟಕ ಡಿಜಿಟಲ್ ಹಾಗೂ ಸ್ಮಾರ್ಟ್ ಗ್ರಂಥಾಲಯ ಉದ್ಯೋಗ ಮಾಹಿತಿ ಕೇಂದ್ರಕ್ಕೆ ಕೆನರಾ ಬ್ಯಾಂಕ್ ಅಧಿಕಾರಿ ರಾಕೇಶ ಚೆಟ್ಟಿ ಚಾಲನೆ ನೀಡಿದರು.
ಕರ್ನಾಟಕ ಕಂಪ್ಯೂಟರ್ ಅಕಾಡೆಮಿ ವತಿಯಿಂದ ಪ್ರಾರಂಭಿಸಲಾದ ಗ್ರಂಥಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರ ಹಾಗೂ ಡಿಜಿಟಲ್ ಗ್ರಂಥಾಲಯ ಅವಶ್ಯಕತೆ ತುಂಬಾ ಇದ್ದು ಯುವ ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಸ್ಥಳೀಯವಾಗಿ ಹುಟ್ಟಿಕೊಂಡ ಇಂತಹ ಆಧುನಿಕ ಗ್ರಂಥಾಲಯ ಸದುಪಯೋಗ ಪಡಿಸಿಕೊಂಡು ಓದಿನ ಕಡೆಗೆ ಗಮನ ಹರಿಸಿ ಜೀವನವನ್ನು ಉಜ್ವಲಗೊಳಿಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪರಶುರಾಮ ದಾವಣೆ, ಜಯಕುಮಾರ್ ಸನದಿ, ಡಾ. ಬ್ರಹ್ಮಾನಂದ ಉಗಾರೆ, ಶೃತಿ ಹ್ಯಾರಿಸ, ಯುವ ಧುರೀಣ ರಾಜು ನೀಡಗುಂದಿ, ಖಾಲೀದ ಪೀರಜಾದೆ, ಸಲ್ಮಾನ ಡಾಂಗೆ ಇತರರು ಉಪಸ್ಥಿತರಿದ್ದರು.





