ಬೆಳಗಾವಿ: ಪ್ರಾದೇಶಿಕ ವಲಯ ಸವದತ್ತಿಯ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಜೀವ್ ಆರ್ ಸಂಸುದ್ದಿ ಅವರು ಈ ಭಾರಿ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಹೌದು..ಪ್ರಾದೇಶಿಕ ವಲಯ ಗೋಕಾಕದಲ್ಲಿ 600 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿ ಅಲ್ಲಿ ಸಸಿಗಳ ನೆಟ್ಟ ಸೇವೆ ಹಾಗೂ ಪ್ರಾದೇಶಿಕ ವಲಯ ಸವದತ್ತಿಯ ಅರಣ್ಯ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಸೇವೆ ಸೇರಿದಂತೆ ಅರಣ್ಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಾಮಾಣಿಕತನದ ಸೇವೆಗಾಗಿ ವಲಯ ಅರಣ್ಯಾಧಿಕಾರಿ ಸಂಜೀವ್ ಆರ್ ಸಂಸುದ್ದಿ ಅವರಿಗೆ ಪ್ರತಿಷ್ಠಿತ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.
ಸಂಜೀವ್ ಸಂಸುದ್ದಿ ವಿವಿರ: ವಲಯ ಅರಣ್ಯಾಧಿಕಾರಿ ಸಂಜೀವ್ ಆರ್ ಸಂಸುದ್ದಿ ಅವರು ಮೂಲತಃ ಕರದುಂಟು ನಾಡಿವರು. ಅಂದರೆ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದವರು. ಇವರು 2007ನೇ ಸಾಲಿನ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡು ವಿವಿಧೆಡೆ ಕೆಲಸ ನಿರ್ವಹಿಸಿ ಅರಣ್ಯ ಇಲಾಖೆಯಲ್ಲಿ ಸೈ ಎನಿಸಿಕೊಂಡ ವಲಯ ಅರಣ್ಯಾಧಿಕಾರಿಯಾಗಿದ್ದಾರೆ.
ಸಂಜೀವ್ ಗೆ ಮುಖ್ಯಮಂತ್ರಿಗಳ ಪದಕ: ವಿವಿಧ ಹಂತದ ಕೆಲಸಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದ ಅರಣ್ಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡುವ ಯೋಜನೆಯೂ ಜಾರಿಯಲ್ಲಿದ್ದು, ಪ್ರಾದೇಶಿಕ ವಲಯ ಸವದತ್ತಿಯ ವಲಯ ಅರಣ್ಯಾಧಿಕಾರಿ ಸಂಜೀವ್ ಆರ್ ಸಂಸುದ್ದಿ ಅವರು, 2007ನೇ ಸಾಲಿನ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡು ನಂತರದಲ್ಲಿ ಗೋಕಾಕ, ಕೊಳ್ಳೆಗಾಲ, ಚಿಕ್ಕೋಡಿ, ಹುಕ್ಕೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಪ್ರಾದೇಶಿಕ ವಲಯ ಸವದತ್ತಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ವಲಯ ಅರಣ್ಯಾಧಿಕಾರಿ ಸಂಜೀವ್ ಆರ್ ಸಂಸುದ್ದಿ ಅವರ ಈ ಸಾಧನೆಗೆ ಅವರು ಕಲಿತ ಶಾಲೆಯ ಶಿಕ್ಷಕರು ಹಾಗೂ ದುರದುಂಡಿ ಗ್ರಾಮದ ಹಿರಿಯ ಮುಖಂಡರು ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.”





