ಬೆಳಗಾವಿ.ಕುಡಚಿ
ಸೈನಿಕರು ಗಡಿಯಲ್ಲಿ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ, ಪ್ರಾಣ ಲೆಕ್ಕಿಸದೆ ದೇಶ ಸೇವೆ ಮಾಡುತ್ತಾರೆ ಇದರಿಂದ ದೇಶದೊಳಗಡೆ ನಾವು ಸುರಕ್ಷಿತವಾಗಿದ್ದೇವೆ ಅವರ ತ್ಯಾಗ, ಬಲಿದಾನ, ಸೇವಾ
ಮನೋಭಾವನೆಗೆ ಪ್ರತಿಯೊಬ್ಬ ದೇಶದ ಪ್ರಜೆ ಗೌರವ ನೀಡಬೇಕು. ನಮ್ಮ ಇಲಾಖೆ ದೇಶ ಕಾಯುವ ಯೋಧರ ಕುಟುಂಬಗಳಿಗೆ ಸದಾ ಶ್ರೀರಕ್ಷೆಯಾಗಿರುತ್ತೇವೆ ಎಂದು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಆರ.ಬಸರಗಿ ಭರವಸೆ ನೀಡಿದರು.
ಅವರು ರಾಯಬಾಗ ಪಟ್ಟಣದ ತಾಲೂಕಾ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸ್ವೀಕರಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ದೇಶ ಸೇವೆ ಸಲ್ಲಿಸಿ ಇತ್ತಿಚೆಗೆ ನಿವೃತ್ತಿ ಹೊಂದಿದ ಮಾಜಿ ಸೈನಿಕರಿಗೆ ಸತ್ಕರಿಸಿ ಗೌರವಿಸಿದರು.
ನಂತರ ಹಾಲಿ ಹಾಗೂ ಮಾಜಿ ಸೈನಿಕರ ಕುಂದು ಕೊರತೆಗಳ ಕುರಿತು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಅಥಣಿ ಪೊಲೀಸ್ ಉಪ ಅಧೀಕ್ಷಕ ಪ್ರಶಾಂತ ಮುನ್ನೊಳ್ಳಿ,
ರಾಯಬಾಗ ತಾಲೂಕಾ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಕಮಲಾಕ್ಷಿ ಉಪಾಧ್ಯಕ್ಷ ಮಹಾದೇವ ಹುಗಾರ, ಆನಂದ ಮೋಳೆ, ತಮ್ಮಾಣಿ ಸರಿಕರ, ಕೃಷ್ಣಾ ಮಾನೆ, ವೃಷಭ ಮಗದುಮ, ಸಂತೋಷ ಬಿಸೂರ, ಲಕ್ಷ್ಮಣ ಪಾಟೀಲ ತಾಲೂಕಿನ ಮಾಜಿ ಹಾಲಿ ಸೈನಿಕರು ಇತರರು ಉಪಸ್ಥಿತರಿದ್ದರು.
ಮಾಜಿ ಸೈನಿಕ ಗೋಪಾಲ ಪೂಜೇರಿ ನಿರೂಪಿಸಿದರು.






