ಮೂಡಲಗಿ:
ಹಳ್ಳೂರ.
ಆತ್ಮವೇ ಪರಮ ಸತ್ಯ ಆತ್ಮವೇ ದೇವರು ತನ್ನ ತಾನು ಅರಿತವನೆ ದೇವರು ಬಂದನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ ಹೆಸರು ಆನೇಕವಿದ್ದರು ದೇವರೊಬ್ಬನೆ ನಾಮ ಹಲವು ನಾಮಸ್ಮರಣೆ ಬಹಳ ಶ್ರೇಷ್ಟವೆಂದು ಪ್ರಭುಜಿ ಬೆನ್ನಾಳೆ ಮಹಾರಾಜರು ಹೇಳಿದರು
ಅವರು ದುಂಡಪ್ಪ ಕೌಜಲಗಿ ಅವರ 12 ವರ್ಷದ ಪುಣ್ಯ ತಿಥಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಹಣ ಅದಿಕಾರವಿದ್ದರ ಬೆನ್ನು ಹತ್ತುವರಿದ್ದಾರೆ ಸತ್ಕಾರ್ಯ ಮಾಡುವುವರ ಸತ್ಯ ಧರ್ಮ ವಿದ್ದವರಿಗೆ ಸಹಾಯ ಸಹಕಾರ ಮಾಡಿ ಪುಣ್ಯ ಪಡೆದುಕೊಳ್ಳಿ ಶುದ್ಧ ಕಾಯಕದಲ್ಲಿ ದೇವರ ನಾಮಸ್ಮರಣೆ ಮಾಡುತ್ತ ಜೀವನ ಸಾಗಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಲು ಸಾಧ್ಯ ಇನ್ನೊಬ್ಬರ ಮನಸ್ಸು ನೋಯಿಸಿ ಪಾಪ ಕರ್ಮ ಮಾಡಿ ಯಜ್ಞ ಯಾಗಾದಿಗಳನ್ನು ಮಾಡಿದರೆ ಫಲವಿಲ್ಲವೆಂದು ಹೇಳಿದರು.
ಅರವಿಂದ ವಕೀಲರು ಮಾತನಾಡಿ ಶ್ರಾವಣ ಮಾಸದಲ್ಲಿ ದೇವರ ನಾಮಸ್ಮರಣೆ ಭಕ್ತಿ ದಾನ ಧರ್ಮದಂತ ಪುಣ್ಯದ ಕಾರ್ಯಗಳನ್ನು ಮಾಡಬೇಕು ಒಳ್ಳೆಯವರ ಸಾಧು ಸಂತರ ಸಂಘ ಮಾಡಿದರೆ ಒಳ್ಳೆಯದು ಮನಸ್ಸಿನ ಹೊಯ್ದಾಟವೆ ಮಹಾ ರೋಗಿ ಮನಸ್ಸು ಶುದ್ಧ ಇದ್ದವನೆ ಮಹಾಜ್ಞಾನಿ , ಕೆಟ್ಟವರ ಹಿಂದೆ ಜನ ಬೆಂಬಲವಿದ್ದರೆ ಒಳ್ಳೆಯವರ ಹಿಂದೆ ದೇವ ಬಲವಿರುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಮೋಹನ ಗೌಡ ಪಾಟೀಲ. ಭೀಮಶಿ ಮಗದುಮ.ತುಳಜವ್ವ ಕೌಜಲಗಿ.ಗೀರಮಲ್ಲಪ್ಪ ಕೌಜಲಗಿ. ಸಂಗಮೇಶ ಅಂಗಡಿ. ಶಂಕರ ಅಂಗಡಿ. ಲಕ್ಷ್ಮಣ ಹೊಸಮನಿ. ಮುರಿಗೆಪ್ಪ ಮಾಲಗಾರ.ಬಸು ಹೊಸಮನಿ.ದುಂಡಪ್ಪ ಕೌಜಲಗಿ.ಸಂಗಪ್ಪ ದುರದುಂಡಿ,ವೀರೇಶ ಗೌಡ ಪಾಟೀಲ್.ಮಹಾದೇವ ಕೌಜಲಗಿ.ಗುರುಪಾದ ಅಂಗಡಿ.ಶ್ವೇತಾ ಕೌಜಲಗಿ ಸೇರಿದಂತೆ ಅನೇಕರಿದ್ದರು.





