ವರದಿ :ರಾಜು ಮಡಿವಾಳ
ರಾಯಬಾಗ :ಪಟ್ಟಣದಲ್ಲಿ ದಿನನಿತ್ಯ ವಿದ್ಯುತ ಸರಿಯಾಗಿ ಸರಬರಾಜು ಆಗದಿರುವ ಹಿನ್ನಲೆಯಲ್ಲಿ ಹಲವಾರು ಕಾರ್ಖಾನೆಗಳು, ಗ್ಯಾರೇಜಗಳು, ಹಾಲಿನ ಡೈರಿಗಳು, ಹೊಟೇಲಗಳು ಸೇರಿದಂತೆ ಇನ್ನು ಹಲವಾರು ಉದ್ಯೋಗಗಳಿಗೆ ಕಾರ್ಯನಿರ್ವಹಿಸಲು ತೊಂದರೆ ಅನುಭವಿಸುವಂಥಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮೆಕ್ಯಾನಿಕಲ ಅಸೋಸಿಯೇಷನ, ಸಾರ್ವಜನಿಕರು ಹೆಸ್ಕಾಂ ಇ ಇ ಅನಂದ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.
ಮಾತನಾಡಿದ ಕರವೇ ಅಧ್ಯಕ್ಷ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಾದಲ್ಲಿ ಪಟ್ಟಣದಲ್ಲಿರುವ ವಿದ್ಯುತ್ ಸರಬರಾಜನ್ನು ನಿಲ್ಲಿಸಿ ದಿನಕ್ಕೆ ಸುಮಾರು ಐದರಿಂದ ಆರು ಬಾರಿ ಒಂದು ಗಂಟೆ ಅರ್ಧ ಗಂಟೆ ವಿದ್ಯುತ್ ಸರಬರಾಜುದಲ್ಲಿ ತೊಂದರೆ ಮಾಡುವುದರಿಂದ ಉದ್ಯೋಗಗಳ ಮೇಲೆ ಭಾರೀ ಪ್ರಮಾಣದ ಹೊಡೆತ ಬೀರುತ್ತಿದ್ದು ಆದಷ್ಟು ಬೇಗನೆ ಪಟ್ಟಣದಲ್ಲಿ ಅಂಡರ್ ಗ್ರೌಂಡ್ ವಿದ್ಯುತ ಕಾಮಗಾರಿಯನ್ನು ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ತಾಲೂಕಿನಲ್ಲಿರುವ ವಾಣಿಜ್ಯ ವಿದ್ಯುತ್ ಸಂಪರ್ಕದ ಕನಿಷ್ಠ ದರ ಮೊದಲು 100ರೂ ಇತ್ತು ಈಗ 240ರೂ ಹೆಚ್ಚಿಗೆ ಮಾಡಲಾಗಿದೆ ಸದರಿ ದರವನ್ನು ಕಡಿತ ಮಾಡಿ ವಾಣಿಜ್ಯ ಉದ್ಯೋಗದಾರರಿಗೆ ಹೊರೆಯಾದ ರಕ್ಕಮನ್ನು ಇಳಿಸಿ ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಗಡ್ಡಿ, ನಾರಾಯಣ ಮೇತ್ರಿ, ರಾಜು ಕುಲಗುಡೆ, ಕೃಷ್ಣ ಲೋಹಾರ, ಆನಂದ ಹುದ್ದಾರ, ಮಲ್ಲು ಕುಲಗುಡೆ, ಸಂತೋಷ ಕೋಳಿ, ಉಮೇಶ ಮಸಾಲಾಜಿ, ಪ್ರಕಾಶ ಮಾಳಿ ಹಾಗೂ ಇತರರು ಉಪಸ್ಥಿತರಿದ್ದರು.





