ಗಣೇಶನಿಗೆ ಸಾಮೋಹಿಕ ಭಾವಪೂರ್ಣ ವಿದಾಯ ಹೇಳಿದ ಕುಡಚಿ ಜನತೆ

Share the Post Now


ಬೆಳಗಾವಿ.ಕುಡಚಿ:-
ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಕುಡಚಿ ಗ್ರಾಮೀಣ ಭಾಗದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಗಣೇಶ ಮಂಡಳಿಗಳು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಒಟ್ಟು 18 ಗಣೇಶನ ಮೂರ್ತಿಗಳಿಗೆ ಅತೀ ವಿಜೃಂಭಣೆ ಅದ್ಧೂರಿಯಾಗಿ ವಿದಾಯ ಹೇಳಿದರು.

ಬೆಳಗಾವಿ ನಂತರ ಅತಿ ದೊಡ್ಡ ಹಾಗೂ ಒಂದೇ ದಿನದಲ್ಲಿ ವಿಸರ್ಜನೆಗೊಳ್ಳುವ ಗಣೇಶ್ ಭವ್ಯ ಮೆರವಣಿಗೆಗೆ ಗಣೇಶ ಮಂದಿರ ಎದುರಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಆರ.ಬಸರಗಿ, ಅಥಣಿ ಉಪ ಅಧೀಕ್ಷಕ ಪ್ರಶಾಂತ ಮುನ್ನೊಳ್ಳಿ, ವೃತ್ತ ನಿರೀಕ್ಷಕ ರತನಕುಮಾರ ಜಿರಗ್ಯಾಳ, ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ ಕೆಲ ಗಣೇಶ ಮಂಡಳಿಗಳಿಗೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ನಾಲ್ಕು ದಿನಗಳ ಕಾಲ ಗಣೇಶನಿಗೆ ಅನೇಕ ಅಲಂಕಾರಕ ವಸ್ತುಗಳು, ದೀಪಗಳಿಂದ ಅಲಂಕಾರಗೊಳಿಸಿ. ನಿತ್ಯ ಒಂದೊಂದು ಕಾರ್ಯಕ್ರಮ ಆಯೋಜನೆ, ದಿನಾಲೂ ಮಹಾ ಪ್ರಸಾದ ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಐದನೆಯ ದಿನ ಗಣೇಶನನ್ನು ಸಿಂಗರಿಸಿ, ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕೃಷ್ಣಾ ನದಿಯಲ್ಲಿ ವಿದಾಯ ಹೇಳುವರು.

ಅದೇ ರೀತಿ ಈ ವರ್ಷವು ಎಲ್ಲ ಮಂಡಳಿಗಳ ಗಣೇಶ ಮೂರ್ತಿಗಳು ಗಣೇಶ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.  ಜನಪ್ರತಿನಿಧಿಗಳು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತದೊಂದಿಗೆ ಗಣೇಶ ಮಂದಿರದ ಮೂಲಕ ಪ್ರಾರಂಭವಾದ ಮೆರವಣಿಗೆ ರೈಲು ನಿಲ್ದಾಣ, ದೌ ಹೊಟೇಲ, ಕೆನರಾ ಬ್ಯಾಂಕ್, ಅಗಸಿ ಬಾಗಿಲು, ದತ್ತ ಮಂದಿರ ಹಾಗೂ ಜೈನಗಲ್ಲಿ ಮೂಲಕ ಕೃಷ್ಣಾ ನದಿಯವರೆಗೆ ಪ್ರತಿ ಗಣೇಶ ಮಂಡಳಿಯವರು ವಿವಿಧ ರೀತಿಯ ಅಲಂಕಾರಗೊಳಿಸಿ ಈ ಬಾರಿ ಪ್ರತಿ ಮಂಡಳಿಯ ಯುವಕರು ವಿವಿಧ ನಾಮಫಲಕಗಳನ್ನು ಹಿಡಿದು ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ, ಉತ್ಸಾಹದಿಂದ ಜೈ ಕಾರ ಹಾಕುವ ಮೂಲಕ ಗಣೇಶನಿಗೆ ಒಂದೇ ದಿನ ಸಾಮೋಹಿಕವಾಗಿ ವಿದಾಯ ಹೇಳಿದರು.  ಈ ಒಂದು ಭವ್ಯ ಮೆರವಣಿಗೆ ನೋಡಲು ಸುತ್ತ ಮುತ್ತಲಿನ ಊರುಗಳಿಂದ ಸಹಸ್ರಾರು ಭಕ್ತ ಜನಸ್ತೋಮ ಕಣ್ತುಂಬಿಕೊಂಡರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ ನೇತೃತ್ವದಲ್ಲಿ ಒಬ್ಬ ಹೆಚ್ಚುವರಿ ಎಸ್.ಪಿ. ಒಬ್ಬ ಡಿವಾಯೆಸ್ಪಿ, ನಾಲ್ಕುಜನ ಸಿಪಿಐ, ಎಂಟು ಜನ ಪಿಎಸ್‌ಐ, ಹತ್ತು ಜನ ಎಎಸ್‌ಐ, 110ಕ್ಕೂ ಹೆಚ್ಚು ಪೊಲೀಸ್ ಪೇದೆ, 20 ಗೃಹ ರಕ್ಷಕರ ತಂಡ ಬಂದೂಬಸ್ತದಲ್ಲಿ ತೊಡಗಿಸಿ ಮೆರವಣಿಗೆ ಯಶಸ್ವಿಯಾಗಲು ಸಹಕರಿಸಿದರು.

ಈ ಸಂದರ್ಭದಲ್ಲಿ ಕುಡಚಿ ಪಿಎಸ್‌ಐ ಪ್ರೀತಮ ನಾಯಿಕ, ತನಿಖಾ ಪಿಎಸ್ಐ ಶಿವರಾಜ್ ಧರಿಗೋಣ, ಹಾರೂಗೇರಿ ಪಿಎಸ್‌ಐ ಮಾಳಪ್ಪ ಪೂಜೇರಿ,  ಪುರಸಭೆ ಅಧ್ಯಕ್ಷ ಹಮೀದೋದೀನ ರೋಹಿಲೆ, ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಶೇಖರ ದಳವಾಯಿ, ಉಪಾಧ್ಯಕ್ಷ ಶೀತಲ ಲೋಹಾರ, ಕಾರ್ಯದರ್ಶಿ ಪ್ರೇಮ ಗುಪ್ತ, ಸಲಹಾ ಸಮಿತಿ ಅಧ್ಯಕ್ಷ ಸಿದ್ದಾನಿ ಸಣ್ಣಕ್ಕಿ, ಉಪಾಧ್ಯಕ್ಷ ಶ್ರೀಮಾನ ನಾಯಿಕ, ಕಾರ್ಯದರ್ಶಿ ಧನ್ಯಕುಮಾರ ಮನಗುತ್ತಿ, ಹಿರಿಯರಾದ ರತ್ನಂಜಯ ಕದ್ದು, ಶಾಂತಾರಾಮ್ ಸಣ್ಣಕ್ಕಿ, ಪರಶುರಾಮ ವಡ್ಡರ, ವಿನೋದ್ ಮಗದುಮ, ಶ್ರೀಶೈಲ ದರೂರೆ, ಲಕ್ಷಟ್ಟಿ ತೇಲಿ, ರಮೇಶ ಕೋಳಿಗುಡ್ಡ, ಜಯಕುಮಾರ್ ಸನದಿ, ಗ್ರಾಮ ಲೆಕ್ಕಾಧಿಕಾರಿ ವಾಯ. ಕೆ. ಹೆಳವರ,  ಶಿವಕುಮಾರ ಸನದಿ, ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಪುರಸಭೆ ಸದಸ್ಯರು, ಗ್ರಾಮ ಪಂಚಾಯಿತ ಸದಸ್ಯರು, ಹಾಗೂ ಗಣೇಶ ಉತ್ಸವ ಸಮಿತಿ ಕಾರ್ಯಕಾರಿಣಿ ಹಾಗೂ ಸಲಹಾ ಸಮಿತಿ ಕಾರ್ಯಕರ್ತರು ಹಾಗೂ ಎಲ್ಲ ಗಣೇಶ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!