ಹಳ್ಳೂರ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಬಿ ಸಿ ಟ್ರಸ್ಟ್ ( ರಿ ) ಮೂಡಲಗಿ ಇವರ ಆಶ್ರಯದಲ್ಲಿ ರಾಜಾಪುರ ವಲಯದ ಗಣೇಶವಾಡಿ ಕಾರ್ಯಕ್ಷೇತ್ರದಲ್ಲಿ ನರ್ಸರಿ ರಚನೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದ ಡಾ ಪರಶುರಾಮ್ ಪಾಟೀಲ. ತೋಟಗಾರಿಕೆ ವಿಜ್ಞಾನಿ ಇವರು ನರ್ಸರಿ ರಚನೆ ಬಗ್ಗೆ ಪಾಲಿ ಹೌಸ್ ಮಾಹಿತಿ ಹಸಿರು ಮನೆ ರಚನೆ ಬಗ್ಗೆ, ಕಬ್ಬಿನಲ್ಲಿ ಅಂತರ ಬೆಳೆಯಾಗಿ ತರಕಾರಿ ಬೆಳೆಯುವ ಬಗ್ಗೆ ಎರೆಹುಳ ಗೊಬ್ಬರ ಪೂರ್ಣ ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕರಾದ ಮೈಲಾರೆಪ್ಪ ಪೈಲಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸ್ವ ಸಹಾಯ, ಸಂಘ ದ ಸದಸ್ಯರು.ರೈತರಾದ ಮಾರುತಿ ಜಾಧವ. ದುಂಡಪ್ಪ ಮುಲಿಮನಿ .ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸೇವಾ ಪ್ರತಿನಿಧಿಯಾದ ಮಹಾದೇವಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮೈಲಾರಪ್ಪ ಪೈಲಿ ಸ್ವಾಗತಿಸಿದರು. ಆನಂದ್ ಮಂಟೂರ್ ವಂದಿಸಿದರು.





