ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ನೂತನವಾಗಿ ಕಂಚಿನ ಮೂರ್ತಿಯನ್ನು ಉದ್ಘಾಟನೆ ನೆರವೇರಿಸಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ
ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ”
ವೈಚಾರಿಕವಾಗಿ, ಪ್ರಗತಿಪರವಾದ ಸಿದ್ಧಾಂತ ಇಟ್ಟುಕೊಂಡಿರುವ ಅವರಿಗೆ ಮಾರ್ಗದರ್ಶನ ನೀಡಲು ನಾಯಕರು ಬೇಕು. ಆ ಜವಾಬ್ದಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ವಹಿಸಿಕೊಳ್ಳುತ್ತಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲ ರಾಜಕಾರಣಿಗಳಿಗೆ, ಯುವಕರಿಗೆ ಅವರು ಮಾದರಿಯಾಗಿ ನಮ್ಮನ್ನೆಲ್ಲ ಮುನ್ನಡೆಸಿಕೊಂಡು ಹೋಗುವ ನಂಬಿಕೆ ನನಗಿದೆ” ಎಂದರು.
ಈ ರೀತಿಯ ತತ್ವ ಬದ್ಧತೆ ಇರುವ ನಾಯಕರು ಸಿಗುವುದು ಬಹಳ ಕಷ್ಟ. ಆದರೆ ಅಂತಹ ಕೆಲಸವನ್ನು ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರೆಸಲಿ” ಎಂದು ಆಶಿಸಿದರು.
ರಾಜ್ಯ ರಾಜಕೀಯದಲ್ಲಿ ಈಗಾಗಲೇ ನವೆಂಬರ್ ಕ್ರಾಂತಿಯ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿದ್ದರಾಮಯ್ಯನವರ ಅವರ ಪುತ್ರ ಡಾ.ಯತೀಂದ್ರ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ.
ಲೋಕೋಪಯೋಗಿ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿ ಬಸವಣ್ಣನವರ,ಕನಕದಾಸರಂತಹ ಮಹಾನ ಮೇಧಾವಿಗಳ ಪುತ್ಥಳಿ ನಿರ್ಮಾನವಾಗಿ ಅವರ ತತ್ವ ಆದರ್ಶಗಳನ್ನು ಯುವ ಪೀಳಿಗೆಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾರು ಮೇಲು ಕೀಳು ಎಂಬ ಬೇಧ ಭಾವ ಮಾಡದೆ ಎಲ್ಲರನ್ನು ಸರಿ ಸಮನಾಗಿ ಕಾಣಬೇಕು.
ಜಾತಿ ಗಣತಿ ನಿಮ್ಮ ಸ್ಥಿತಿ ಗತಿ ತಿಳಿದು ಬಡವರನ್ನು ಶ್ರೀಮಂತರಾಗಿಸುವ ಉದ್ದೇಶವಾಗಿದೆ. ನಾವು ಮಾತು ಕೊಟ್ಟಂತೆ ರೈತರಿಗೆ ಕೃಷಿ ಗೆ ಅನುಕೂಲವಾಗುವಂತೆ ಕಿನಾಲ್ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ ಎಂದು ಹೇಳಿದರು.
ಮೂರ್ತಿ ಉದ್ಘಾಟನೆ ತದ ನಂತರ ಭವ್ಯ ಮೆರವಣಿಗೆಯೊಂದಿಗೆ ಸಚಿವ ಸತೀಶ ಜಾರಕಿಹೊಳಿ ವಿಧಾನಪರಿಷತ್ ಸದಸ್ಯ ಡಾ. ಯತಿಂದ್ರ ಸಿದ್ದರಾಮಯ್ಯ ಹಲವು ಮಹಾಸ್ವಾಮಿಗಳ ಜೋತೆಗೆ ಭವ್ಯ ವೇದಿಕೆ ಮೇಲೆ ಕರೆ ತರಲಾಯಿತು
ಅಮರೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಮಯದಲ್ಲಿ ಸಿದ್ದೇಶ್ವರ ಶರಣರು.ಬೆಳಗಾವಿ ನಗರಾಭಿರುದ್ಧಿ ನಿಗಮದ ಅಧ್ಯಕ್ಷ ಲಕ್ಷ್ಮಣ ಚಿಂಗಳೇ ತೇರದಾಳ ಮತಕ್ಷೇತ್ರದ ಮುಖಂಡ ಸಿದ್ದು ಕೊಣ್ಣೂರ ಭಗೀರಥ ನಿಗಮದ ಅಧ್ಯಕ್ಷ ಬರಮಣ್ಣ ಉಪ್ಪಾರ.ಮಾ ಕು ಸ ಅ ರಾಜೇಂದ್ರ ಸಣ್ಣಕ್ಕಿ.ಕುರಿ ಉಣ್ಣೆ ನಿಗಮದ ಉಪಾಧ್ಯಕ್ಷ ಕಾಶೀನಾಥ್ ಹುಡೆದ ಪಂಚ್ ಗ್ಯಾರಂಟಿ ಅಧ್ಯಕ್ಷ ವಿನಯ ನಾವಲಗಟ್ಟಿ.ತಹಸೀಲ್ದಾರ ಮಹಾದೇವ ಸಣಮುರಿ.ಕಂದಾಯ ನಿರೀಕ್ಷಕ ರಾಜು ದಾನೊಳಿ.ಸಿ ಬಿ ಕೂಲಿಗೋಡ.ಭೀಮಶಿ ಮಗದುಮ. ಗ್ರಾಂ ಅದ್ಯಕ್ಷ ನಿಂಗಪ್ಪ ನಿಡಗುಂದಿ.ಮಲ್ಲಪ್ಪ ಸಕ್ರೆಪ್ಪಗೋಳ.ಭರಮಪ್ಪ ಬಿಳಿಕುರಿ.ಜೊತೆಪ್ಪ ಬಿಳಿಕುರಿ.ಭೀರಪ್ಪ ನೀಡಗುಂದಿ.ಮಾಯಪ್ಪ ಸನದಿ.ಸುರೇಶ ಸಿಂಗಾಡಿ.ಲಕ್ಕಪ್ಪ ಬಿಳಿಕುರಿ.ಬಾಳಪ್ಪ ನಿಡಗುಂದಿ.ಮಲ್ಲಪ್ಪ ಸಿಂಗಾಡಿ.ರಂಗಪ್ಪ ಸನದಿ.ಮತ್ತಿತರರು ಉಪಸ್ಥಿತರಿದ್ದರು.
ವರದಿ ಮುರಿಗೆಪ್ಪ ಮಾಲಗಾರ





