ವರದಿ: ಪ್ರೊ. ರಾಜಶೇಖರ್ ಶೇಗುಣಶಿ.
ಬೆಳಗಾವಿ: ರುಕ್ಟಾ ಸಂಘಟನೆಯು ಹಾಗೂ ರಾಚವಿವಿಯ ನಾನ್ ಯುಜಿಸಿ ಟೀಚರ್ಸ್ ಅಸೋಸಿಯೇಷನ್ ಇವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಇವರಿಗೆ ಸಂಭಾವನೆ ದಿನಭತ್ಯೆ ಮತ್ತು ಟ್ರಾವೆಲ್ ಅಲ್ಲೊನ್ಸ್ ಇತ್ಯಾದಿಗಳ ಕುರಿತು ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿಲಾಯಿತು. ಪ್ರತಿ ವರ್ಷ ಸರ್ಕಾರದ ಸುತ್ತೋಲೆಯ ಪ್ರಕಾರ ಪರೀಕ್ಷೆ ಮೌಲ್ಯಮಾಪಕರ ದಿನಭತ್ಯೆ, ಮತ್ತು ಇತರ ಹಲವಾರು ಭತ್ಯೆಗಳನ್ನು 10% ವರೆಗೆ ಅಥವಾ ಪ್ರತಿ ಎರಡು ವರ್ಷಗಳಿಗೊಮ್ಮೆ 20% ಅಥವಾ 25% ಹೆಚ್ಚಿಸಬೇಕು ಎಂದು ಸರಕಾರದ ಆದೇಶ ಇದೆ. ಆದ್ದರಿಂದ ರುಕ್ಟಾದ ಸದಸ್ಯರು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು,
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲ್ಯದ ಕುಲಪತಿಗಳು, ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳನ್ನು ಭೇಟಿ ಮಾಡಿ ಬೇಡಿಕೆ ಕುರಿತು ಮನವಿಯನ್ನು ಸಲ್ಲಿಸಲಾಯಿತು.
ಅವರು ಸಕಾರಾತ್ಮಕ ಪ್ರತಿಕ್ರಿಯಿಸಿದ್ದಾರೆ ಎಂದು ರುಕ್ಟಾ ಅಧ್ಯಕ್ಷ ಎಂ ಎ. ಬಿರಾದಾರ ಹೇಳಿದರು.
ಅವರು ಬೆಳಗಾವಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿ ರುಕ್ಟಾ ಆಂತರಿಕ ಮುಖ್ಯ ಕಸ್ಟೂಡಿಯನ್ಗಳ ಲೋಕಲ್ ಭತ್ಯೆಯ ಕುರಿತು ಮಾತನಾಡಿದರು.
ನಂತರ ಆಗಮಿಸಿದ ಬೇರೆ ಬೇರೆ ಕಾಲೇಜಿನ ಪ್ರಾಚಾರ್ಯರು ಲೋಕಲ್ ಭತ್ಯೆಗಳ ಕುರಿತು ತಮ್ಮ ಧ್ವನಿ ಎತ್ತಿದರು. ನಂತರ ಕುಲಸಚಿವರು ಸಹ ನಮಗೆ ಸಕಾರಾತ್ಮಕವಾಗಿ ಭರವಸೆ ನೀಡಿದರು.
ನಮ್ಮ ಗುರಿಯನ್ನು ಸಾಧಿಸಲು ರುಕ್ಟಾ ನಮ್ಮ ಎಲ್ಲಾ ಅಧ್ಯಾಪಕರನ್ನು ಬೆಂಬಲಿಸುವಂತೆ ಕೇಳುತ್ತದೆ.
ವಿಶ್ವವಿದ್ಯಾಲಯದ ಕುಲಪತಿಗಳು, ಕುಲಚಿವರು ನಮ್ಮ್ ಮನವಿಗೆ ಸ್ಪಂದಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆಂದು ರುಕ್ಟಾ ಸದಸ್ಯರು ಹೇಳಿದರು .
ಈ ಸಂದರ್ಭದಲ್ಲಿ ರುಕ್ಟಾ ಅಧ್ಯಕ್ಷ ಎಂ ಎ ಬಿರಾದಾರ್, ಪ್ರಾಚಾರ್ಯರು ಡಾ. ಎಸ್. ಬಿ. ಬಿರಾದಾರ್, ಪ್ರಕಾಶ ಹಿರೇಮಠ, ಉಮೇಶ್ ದೇಸಾಯಿ, ಎಂ ಎಂ ಪಾಟೀಲ, ರುಕ್ಟಾ ಪದಾಧಿಕಾರಿಗಳು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಾನ್ ಯುಜಿಸಿ ಸಂಘನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.





