ಮೂಡಲಗಿ
ಹಳ್ಳೂರ.
ಶ್ರೀ ಮಹಾಲಕ್ಷ್ಮೀ ಕೃಷಿ ಸೇವಾ ಕೇಂದ್ರವು ರೈತ ಬಾಂಧವರಿಗೆ ಯೋಗ್ಯ ಬೆಲೆಯಲ್ಲಿ ರಾಸಾಯನಿಕಗಳನ್ನು ನೀಡಿ ತೈತರ ಜೊತೆ ಬೆರೆತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾವು ಮಾಡುವ ಕೆಲಸ ಯಶಸ್ವಿ ಕಾಣಬೇಕು ತಮ್ಮಲ್ಲಿ ಪ್ರಾಮಾಣಿಕತೆಯಿದ್ದರೆ ತಕ್ಕ ಪ್ರತಿಫಲ ಸಿಗುತ್ತದೆಂದು ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.
ಅವರು ಹಳ್ಳೂರ ಗ್ರಾಮದ ಗಾಂಧಿನಗರ ಬಾಳೆಶ ನೇಸುರ ಅವರ ತೋಟದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ಕೃಷಿ ಸೇವಾ ಕೇಂದ್ರದ ಉದ್ಘಟನಾ ಸಮಾರಂಭದಲ್ಲಿ ಮಾತನಾಡಿ ಬಾಳೇಶ ನೇಸುರ ಅವರ ಮಹಾಲಕ್ಷ್ಮಿ ಕೃಷಿ ಸೇವಾ ಕೇಂದ್ರವು ಉತ್ತರೊತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು.
ಅಭಿನವ ಗುರುಲಿಂಗ ಮಹಾರಾಜರು ಮಾತನಾಡಿ ಮನುಷ್ಯ ಎಷ್ಟೇ ದೊಡ್ಡವನಾದರು ಕೃಷಿ ಮೂಲವನ್ನು ಮರೆಯಬಾರದು ರೈತರು ಭೂಮಿಯಲ್ಲಿ ಬೇರೆ ಬೇರೆ ರೀತಿಯ ಬೆಳೆಗಳನ್ನು ಬೆಳೆದು ಹೆಚ್ಚು ಲಾಭವನ್ನು ಪಡೆದು ಶ್ರೀಮಂತರಾಗಬೇಕು. ಸರಕಾರವು ಪ್ರತಿ ಹೋಬಳಿ ಮಟ್ಟದಲ್ಲಿ ಕೃಷಿ ಶಾಲೆಗಳನ್ನು ತೆರೆಯಬೇಕೆಂದರು.
ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ರೈತ ಬಾಂಧವರು ಹಿಂದಿನ ಕಾಲದ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಹೋಗುವುದು ಒಳ್ಳೆಯದು. ಗಳಿಸಿದ ಸಂಪತ್ತನ್ನು ಅನಾವಶ್ಯಕ ಖರ್ಚು ಮಾಡಿ ವ್ಯಸನಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೆಡಿರೆಂದು ಹೇಳಿದರು.
ನಾರಾಯಣ ಗುರುಗಳು ಹಾಗೂ ಅಥಣಿಯ ಕೃಷಿ ತಜ್ಞ ಕುಂಬಾರ ಅವರು ರೈತರಿಗೆ ಕೃಷಿ ತಾಂತ್ರಿಕತೆ ಅನೇಕ ರೀತಿಯ ಮಾರ್ಗದರ್ಶನ ನೀಡಿದರು.
ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮಿ ದೇವರ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ.ಬಾಳೆಶ ನೇಸುರ. ನಂದೆಪ್ಪ ನೇಸುರ. ಶ್ರೀಶೈಲ ಬಾಗೋಡಿ. ಬಸಪ್ಪ ಹಡಪದ ಸೇರಿದಂತೆ ಹಳ್ಳೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿದ್ದರು.
ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ, ವಂದಿಸಿದರು.





