ರಾಯಬಾಗ
ಬಾಗೆ ನಾಡಿನ ಹಿರಿಯ ಸಾಹಿತಿಗಳು ಹಾಗೂ ಅಪಾರ ಶಿಷ್ಯ ಬಳಗವನ್ನು ಹೊಂದಿರುವ ಆಂಗ್ಲಭಾಷೆಯ ಅಧ್ಯಾಪಕರಾದ ಶ್ರೀ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ, ಅವರ ದಾಂಪತ್ಯದ ಸ್ವರ್ಣ ಮಹೋತ್ಸವ ಹಾಗೂ ‘ಮೂಡಲ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 25-01-2026 ರಂದು ರಾಯಬಾಗದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಅತೀ ವಿಜೃಂಭಣೆಯಿಂದ ಹಾಗೂ ಅರ್ಥಗರ್ಭಿತವಾಗಿ ನೆರವೇರಿದ್ದು ಬಾಗೆ ನಾಡಿನ ಜನರ ಪ್ರೀತಿ ಹಾಗೂ ಸಾಂಸ್ಕೃತಿಗೆ ದಿವ್ಯ ಸಾಕ್ಷಿಯಾಗಿತ್ತು.
ಹಾರೂಗೇರಿ ಶರಣವಾಹಿನಿಯ ಅಧ್ಯಕ್ಷರಾದ ಶ್ರೀ ಆಯ್, ಆರ್, ಮಠಪತಿ ಅವರು ತೆಂಗಿನ ಸಸಿಗೆ ನೀರೆರೆಯುವುದರೊಂದಿಗೆ ಉದ್ಘಾಟಿಸಿ ಬೆಳಕೂಡ ದಂಪತಿಗಳಿಗೆ ಶುಭ ಕೋರಿದರು. ಜಾನಪದ ತಜ್ಞ ಪ್ರಾ. ಬಾಲಕೃಷ್ಣ ಜಂಬಗಿ ಅವರು ಕೃತಿ ಲೋಕಾರ್ಪಣೆ ಮಾಡುತ್ತ ಬೆಳಕೂಡ ಅವರ ಒಡನಾಟದ ಹಳೆಯ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು.
ಬೆಳಗಾವಿಯ ಸಾಹಿತಿಗಳಾದ ಬಾ. ಕೆ ಎನ್ ದೊಡ್ಡಮನಿ ಅವರು ತಮ್ಮ ಗುರುಗಳಾದ ಬೆಳಕೂಡ ಅವರೊಂದಿಗಿನ ತಮ್ಮ ಗುರು ಶಿಷ್ಯರ ಆತ್ಮಿಯ ಒಡನಾಟದ ಬಗ್ಗೆ ಅಭಿಮಾನದಿಂದ ಮಾತನಾಡಿದರು. ಗೋಕಾವಿ ನಾಡಿನ ಹಿರಿಯ ಸಾಹಿತಿಗಳಾದ ಪ್ರೊ ಚಂದ್ರಶೇಖರ ಅಕ್ಕಿಯವರು ಬೆಳಕೂಡ ಅವರೊಂದಿಗೆ ಅವರ ಶಿಷ್ಯ ಬಳಗದ ಅಭಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮೂಡಲಗಿಯ ಸಾಹಿತಿಗಳಾದ ಶ್ರೀ ಬಾಲಶೇಖರ ಬಂದಿಯವರು ಮೂಡಲಗಿಯ ಪ್ರತಿಷ್ಠಿತ ಬೆಳಕೂಡ ಮನೆತನದ ಬಗ್ಗೆ ಹಾಗೂ ಶ್ರೀಯುತರ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತ ಬಾ ಎಂ ಬಿ ಹೂಗಾರ ಅವರು ಬೆಳಕೂಡರ ಪ್ರೀತಿಯ ಅಭಿಮಾನಿ ಶಿಷ್ಯ ಬಳಗದ ಬಗ್ಗೆ ಹಾಗೂ ಸಾಹಿತ್ಯ ಸಂಗಾತಿಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ್ರೀಮತಿ ಶೋಭಾ ಕುಲಕರ್ಣಿ ಅವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡಾ. ಪಿ, ಜಿ, ಕೆಂಪನ್ನವರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿ ಆಡಿದರು. ಸಾಗರ ಜೆಂಡೆನ್ನವರ ವಂದನಾರ್ಪಣೆ ಮಾಡಿದರು. ಶ್ರೀ ಜ್ಯೋತಿ ರುಪ್ಪಾಳೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಿವಾನಂದ ಬೆಳಕೂಡ ಅವರು ಅಭಿನಂದನಾ ಸಮಿತಿಗೆ, ಕಾರ್ಯಕ್ರಮದ ಎಲ್ಲ ಸಂಘಟಿಕರಿಗೆ, ಬೇರೆ ಬೇರೆ ಊರುಗಳಿಂದ ಹಾಗೂ ಬಾಗೆ ನಾಡಿನಿಂದ ಎಲ್ಲ ಹಿತೈಷಿಗಳಿಗೆ, ಪಾಲ್ಗೊಂಡಿದ್ದರು





