ಮೂಡಲಗಿ.
ಶೋಷಿತರ ಹಕ್ಕಿಗಾಗಿ ಹೋರಾಡಿ ಶಿಕ್ಷಣವೇ ಸಮಾಜರ ಶಕ್ತಿ ಎಂದು ಜಗತ್ತಿಗೆ ಸಾರಿದ ಸಮಾಜ ಸುದಾರಕ ಸಮಾನತೆಯ ಹರಿಕಾರ ಭಾರತ ಶ್ರೇಷ್ಟ ಸಮಾಜ ಸುದಾರಕರಲ್ಲಿ ಒಬ್ಬರಾಗಿರುವ ಮಹಾತ್ಮ ಜ್ಯೋತಿಬಾ ಫುಲೆ ಕೊಡುಗೆ ಅಪಾರವಾದದ್ದು ದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಹಿರೇಮಠ ಹೇಳಿದರು.
ಅವರು ಗ್ರಾಮದ ತೋಟಗೇರ ದೈವದ ಮನೆ ಹತ್ತಿರ ಹಮ್ಮಿಕೊಂಡ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತ್ಯೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾತ್ಮ ಫುಲೆ ಅವರು ಒಬ್ಬ ಮಹಾನ ಸುದಾರಕರಷ್ಟೇ ಅಲ್ಲ ಅವರ ಜೀವನವು ನೈತಿಕ ಧೈರ್ಯ ನಿರಂತರ ಅನ್ವೇಷಣೆ ಮತ್ತು ಸಾಮಾಜಿಕ ಒಳತಿಗಾಗಿ ಅಚಲವಾದ ಬದ್ಧತೆಯಿಂದ ಕೂಡಿತ್ತು 1827ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು.
ಚಿಕ್ಕೋಡಿ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಗಳಾದ ರೇವತಿ ಮಠದ ಮಹಾತ್ಮ ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ನಮ್ಮ ಪುಣ್ಯ ಭೂಮಿಯಲ್ಲಿ ಕಾಲಕಾಲಕ್ಕೆ ಮಹಾನ್ ಪುರುಷರು ಆಶೀರ್ವಾದಕ್ಕೆ ಕಾರಣವಾಗುತ್ತದೆ. ಇವರು ಸಮಾಜ ಬದಲಾವಣೆಗಾಗಿ ಯಾರೋ ಬರುತ್ತಾರೆಂದು ಕಾಯಲಿಲ್ಲ ಬದಲಾಗಿ ತಾವೆ ಬದಲಾವಣೆಯ ಮೂಲ ಶಕ್ತಿಯಾದರು. ಅವರ ಮಾತುಗಳು ಕೆಲಸಗಳು ಇಂದಿಗೂ ಭರವಸೆಯನ್ನು ನೀಡುತ್ತವೆ ಕೇವಲ ಭೂತಕಾಲದ ವ್ಯಕ್ತಿಯಲ್ಲ ಭಾರತದ ಭವಿಷ್ಯಕ್ಕೆ ದಾರಿ ದೀಪವಾಗಿದ್ದಾರೆ ಹಿಂತಹ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಯುವ ಪೀಳಿಗೆಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರು ಮಾತನಾಡಿ ಈ ಸಮಯದಲ್ಲಿ ಭೀಮಶಿ ಮಗದುಮ್.ಹನಮಂತ ತೇರದಾಳ.ಲಕ್ಷ್ಮಣ ಕತ್ತಿ. ಬಸಪ್ಪಾ ಹಡಪದ. ಸಿದ್ಧಪ್ಪ ಕೂಲಿಗೋಡ. ಯಮನಪ್ಪ ನಿಡೋಣಿ.





