ಹಳ್ಳೂರ.
ಗ್ರಾಮದ ಬಳವಂತರಾವ ಕುಲಕರ್ಣಿ ಮಹಾಲಕ್ಷ್ಮಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗಂಗವ್ವ ನಾಗಪ್ಪಾ ಮಾಲಗಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 575 ಅಂಕ, ಶೇ 92 ಗಳಿಸಿ ಶಾಲೆಗೆ ದ್ವೀತಿಯ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿ ಗಂಗವ್ವ ತಂದೆ ನಾಗಪ್ಪ ಮಾಲಗಾರ ಬಡ ಕುಟುಂಬದ ಮನೆತನ ಹೊಂದಿದ್ದು ಬೇರೆಯವರ ಹೊಲ ಮಾಡಿಕೊಂಡು ದಿನ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ತಂದೆ ತಾಯಿ ಅನಕ್ಷರಸ್ಥ ಹಾಗೂ ಕಡು ಬಡತನದ ಕುಟುಂಬದಿಂದ ಬಂದಿರುವ ಗಂಗವ್ವ ಸಾದನೆ ಗಮನಾರ್ಹವಾಗಿದೆ.ಬಡತನದಲ್ಲಿ ಅರಳಿದ ಪ್ರತಿಭೆ ತನ್ನ ಕಠಿಣ ಪರಿಶ್ರಮದಿಂದ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ವಿದ್ಯಾರ್ಥಿನಿ ನಿರಂತರ ಅಧ್ಯಯನ ಮಾಡಿ ಶಿಕ್ಷಕರು ಹೇಳಿದ ಪಾಠಗಳನ್ನು ಜ್ಞಾಪಿಸಿಕೊಂಡು ಟಿವಿ ಮೋಬೈಲ್ ಗಮನ ಹರಿಸದೆ ವಾಟ್ಸಪ್ ಮೂಲಕ ಶಾಲೆಯಿಂದ ಬರುವ ಪಠ್ಯದ ವಿಷಯ ಸಲುವಾಗಿ ಅಷ್ಟೇ ಮೊಬೈಲ ಬಳಕೆ ಮಾಡಿ ನಿರಂತರ ಅಧ್ಯಯನ ಮಾಡಿ ಬಡ ಕುಟುಂಬ ದಲ್ಲಿದ್ದುಕೊಂಡು ಮನೆಗೆಲಸ ಮಾಡಿ ಹೆಚ್ಚು ಅಂಕ ಗಳಿಸಿ ಶಾಲೆಗೆ ದ್ವೀತಿಯ ಸ್ಥಾನ ಪಡೆದಿದ್ದು ಮನೆತನಕ್ಕೆ,ಶಾಲೆಗೆ,ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ನನಗೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುವ ಗುರಿ ಯಿತ್ತು ಬೇರಳಣಿಕೆಷ್ಟು ಅಂಕ ಕಡಿಮೆ ಬಂದಿದ್ದಕ್ಕೆ ನಿರಾಶೆಯಾಗಿದೆ ಎಂದು ಗಂಗವ್ವ ನಾಗಪ್ಪ ಮಾಲಗಾರ ವಿದ್ಯಾರ್ಥಿನಿ ಪತ್ರಿಕೆಗೆ ಹೇಳಿದ್ದಾಳೆ. ವರದಿ ಮುರಿಗೆಪ್ಪ ಮಾಲಗಾರ





