ಹಳ್ಳೂರ.
ಗ್ರಾಮದ ಸೌಭಾಗ್ಯವತಿ ಸುಮಿತ್ರಾದೆವಿ ಪಾಟೀಲ ಪ್ರೌಢ ಶಾಲೆಯ ವಿದ್ಯಾರ್ಥಿ ಭಿಮಪ್ಪ ಹನಮಂತ ಉತ್ತೂರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 597 ಅಂಕ, ಶೇ 95.52 ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ವಿದ್ಯಾರ್ಥಿ ಭೀಮಪ್ಪ ತಂದೆ ಹನಮಂತ ಬಡ ಕುಟುಂಬದ ಮನೆತನ ಹೊಂದಿದ್ದು ಬೇರೆಯವರ ಹೊಲದಲ್ಲಿ ಪತ್ರಾಸ ಸಡ್ ಹಾಕೊಂಡು ದಿನ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ತಂದೆ ತಾಯಿ ಅನಕ್ಷರಸ್ಥ ಹಾಗೂ ಕಡು ಬಡತನದ ಕುಟುಂಬದಿಂದ ಬಂದಿರುವ ಭೀಮಪ್ಪ ಸಾದನೆ ಗಮನಾರ್ಹವಾಗಿದೆ.ಬಡತನದಲ್ಲಿ ಅರಳಿದ ಪ್ರತಿಭೆ ತನ್ನ ಕಠಿಣ ಪರಿಶ್ರಮದಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ವಿದ್ಯಾರ್ಥಿ ನಿರಂತರ ಅಧ್ಯಯನ ಮಾಡಿ ಶಿಕ್ಷಕರು ಹೇಳಿದ ಪಾಠಗಳನ್ನು ಜ್ಞಾಪಿಸಿಕೊಂಡು ಟಿವಿ ಮೋಬೈಲ್ ಗಮನ ಹರಿಸದೆ ವಾಟ್ಸಪ್ ಮೂಲಕ ಶಾಲೆಯಿಂದ ಬರುವ ಪಠ್ಯದ ವಿಷಯ ಸಲುವಾಗಿ ಅಷ್ಟೇ ಮೊಬೈಲ ಬಳಕೆ ಮಾಡಿ ನಿರಂತರ ಅಧ್ಯಯನ ಮಾಡಿ ಬಡ ಕುಟುಂಬ ದಲ್ಲಿದ್ದುಕೊಂಡು ಮನೆಗೆಲಸ ದನ ಕರುಗಳ ವ್ಯವಸ್ಥೆ ಮಾಡಿ ಹೆಚ್ಚು ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದು ಮನೆತನಕ್ಕೆ,ಶಾಲೆಗೆ,ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ವರದಿ ಮುರಿಗೆಪ್ಪ ಮಾಲಗಾರ





