ಡಾ.ಎಸ್.ಪಿ.ತಳವಾರರಿಗೆ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ

Share the Post Now

ವರದಿ:ಸಚಿನ ಕಾಂಬ್ಳೆ

ಕಾಗವಾಡ: ಶಿವಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಪಿ.ತಳವಾರವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ನೀಡುವ ‘ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ-೨೦೨೨’ ದೊರೆತಿದೆ. ಇದನ್ನು ನವದೆಹಲಿಯಲ್ಲಿ ನಡೆದ ೩೮ನೇ ದಲಿತ ಲೇಖಕರ ರಾಷ್ಟ್ರೀಯ ಸಮ್ಮೇಳನದಲ್ಲಿ (ದಿನಾಂಕ ೧೧ ಮತ್ತು ೧೨ ಡಿಸೆಂಬರ್ ೨೦೨೨) ಪ್ರಧಾನ ಮಾಡಲಾಯಿತು.

ಡಾ. ಎಸ್.ಪಿ.ತಳವಾರವರ ಶೈಕ್ಷಣಿಕ ಸಾಧನೆ ಮತ್ತು ತಳಮಟ್ಟದ ಜನಜೀವನವನ್ನು ಮೇಲೆತ್ತುವ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ಪಿ.ತಳವಾರವರನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!