ವರದಿ:ಸಚಿನ ಕಾಂಬ್ಳೆ.
ಕಾಗವಾಡ : ಪಟ್ಟಣದ ರೈತರು ತಮ್ಮ ಜಮೀನುಗಳಿಗೆ ಹೋಗುವ ಕಾಗವಾಡ-ಅಲಾಸ ರಸ್ತೆಯು ಸಂಪೂರ್ಣ ಹದೆಗೆಟ್ಟಿರುವುದನ್ನು ಶಾಸಕರ ಗಮನಕ್ಕೆ ನಿನ್ನೆ ಬುಧುವಾರ ದಿ. ೧೪ ರಂದು ತಂದಾಗ, ಇಂದು ಗುರುವಾರ ದಿ. ೧೫ ರಂದು ಯುವ ಮುಖಂಡ ಶ್ರೀನಿವಾಸ ಪಾಟೀಲರು ಆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ರೈತರ ಪ್ರಸಂಶೆಗೆ ಪಾತ್ರರಾಗಿದ್ದಾರೆ.
ಕಾಗವಾಡ ಪಟ್ಟಣದ ಕಾಗವಾಡ-ಅಲಾಸ ರಸ್ತೆಯು ಸಂಪೂರ್ಣ ಹದೆಗೆಟ್ಟಿರುವುದರಿಂದ ಕಬ್ಬು ಸಾಗಾಟಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗೆ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ರೈತರ ನಿಯೋಗವೊಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ಬುಧವಾರ ಡಿ. ೧೪ ರಂದು ಭೇಟ್ಟಿಯಾಗಿ, ಸಮಸ್ಯೆಯನ್ನು ಹೇಳಿಕೊಂಡಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅವರು ಕಾಮಗಾರಿಯನ್ನು ನಾಳೆಯಿಂದ ಪ್ರಾರಂಭಿಸುವ ಭರವಸೆ ನೀಡಿದ್ದರು.
ಅದರಂತೆ ಇಂದು ಗುರುವಾರ ದಿ. ೧೫ ರಂದು ಅವರ ಅನುಪಸ್ಥಿತಿಯಲ್ಲಿ ಕಾಗವಾಡ ಯುವ ಮುಖಂಡರಾದ ಶ್ರೀನಿವಾಸ ಪಾಟೀಲ ಅವರು ಆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ರೈತರ ಬೇಡಿಕೆ ಇಟ್ಟ ಮರುದಿನವೇ ರಸ್ತೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಅವರ ಈ ಕಾರ್ಯ ರೈತರ ಅಭಿನಂದನೆಗೆ ಪಾತ್ರವಾಗಿದೆ.
ಈ ಸಮಯದಲ್ಲಿ ರೈತ ಮುಖಂಡರಾದ ಅರುಣ ಜೋಶಿ, ರವಿ ಪಾಟೀಲ, ಬಾಳಗೌಡಾ ಪಾಟೀಲ, ಶಂಕರ ದಡಗೆ, ಶಿವಗೌಡಾ ಸುಳಕೂಡ, ಅಲ್ಲಾಭಕ್ತ ಜಮಾದಾರ, ದಯಾನಂದ ದಡಗೆ, ಪಾಯಗೌಡಾ ಪಾಟೀಲ, ದರಿಖಾನ ದಡಗೆ, ಅಸ್ಲಂ ಜಮಾದಾರ, ರಾವಸಾಬ ದಡಗೆ, ಪ್ರಕಾಶ ಮಿರ್ಜೆ, ಅಮರ ಶಿಂಧೆ, ಅಪ್ಪಿ ಚೌಗುಲಾ, ಸಚೀನ ಕವಟಗೆ, ಶೀಲಾದಾರ ಚೌಹಾನ, ಪ್ರಕಾಶ ಧೊಂಡಾರೆ, ವಿಜಯ ದೇವನೆ, ದೀಪಕ ಕಾಂಬಳೆ, ಯಲ್ಲಪ್ಪಾ ಕಾಂಬಳೆ, ಬಬಲು ಕಾಂಬಳೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.