ಎಸ್‌ಡಿಎಂಸಿ ಅಧ್ಯಕ್ಷರಾಗಿ ರಾಕೇಶ್ ಮೈಗೂರ ಮರು ಆಯ್ಕೆ

Share the Post Now

ಅಥಣಿ : ಪಟ್ಟಣದ ವಿಕ್ರಂಪೂರ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ
ರಾಕೇಶ್ ಮೈಗೂರ ಮರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಗೀತಾ ಬಬಲೇಶ್ವರ ಅವಿರೋಧವಾಗಿ ಆಯ್ಕೆಯಾದರು. ಮೇಲುಸ್ತುವಾರಿ ರಚನಾ ಸಮಿತಿಯ ನೇತೃತ್ವವನ್ನು ಪುರಸಭಾ ಸದಸ್ಯ ರಿಯಾಜ್ ಸನದಿ ವಹಿಸಿದ್ದರು. ಈ ವೇಳೆ ನೂತನವಾಗಿ ಆಯ್ಕೆ ಆದ ಹದಿನೆಂಟು ಜನ ಪದಾಧಿಕಾರಿಗಳಿಗೆ ಹೂ ಗುಚ್ಚ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ
ರಾಕೇಶ್ ಮೈಗೂರ ಅವರು ಮಾತನಾಡಿ ಕಳೆದ ಅವಧಿಯಲ್ಲಿ ನನ್ನನ್ನು ಆಕಸ್ಮಿಕವಾಗಿ ಎಸ್ ಡಿ ಎಮ್ ಸಿ ಅದ್ಯಕ್ಷನಾಗಿ ಮಾಡಿದ ಮಕ್ಕಳ ಪೋಷಕರು ನನ್ನ ಜವಾಬ್ದಾರಿ ನಿಭಾಯಿಸುವ ರೀತಿಯ ಜೊತೆಗೆ ನಾನು ಶಾಲೆಗಾಗಿ ಮಾಡಿದ ಅಲ್ಪಸೇವೆಯನ್ನು ಪರಿಗಣಿಸಿ ಎರಡನೆ ಅವಧಿಗೆ ನನ್ನನ್ನು ಅಧ್ಯಕ್ಷ ಸ್ಥಾನ ನೀಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದಾರೆ.ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಮುಂಬರುವ ಅವಧಿಯಲ್ಲಿಯೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಶ್ರಮಿಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಿಯಾಜ ಸನದಿ,ಮುಖಡರಾದ ಸಯ್ಯದ ಗಡ್ಡೆಕರ,ಮುಖ್ಯೊಪಾದ್ಯರಾದ ಎಸ್ ಎಸ್ ಮುಗಳಖೋಡ,ಶಿಕ್ಷಕರಾದ ಪಿ ಐ ಬಡಿಗೇರ,ಎಸ್ ಎಮ್ ಹಡಲಗಿ,ಜಿ ಎನ್ ಕುಂಬಾರ,ಎಸ್ ಎಸ್ ಪುಜಾರಿ,ವಿ ಎಸ್ ವಾಗಮೋಡೆ, ಬಿ ಎ ಬರಡಗಿ,ಎ ಎಸ್ ಜೋಶಿ, ಸೇರಿದಂತೆ ಮಕ್ಕಳ ಪಾಲಕರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!