ವರದಿ. ರವಿ ಬಿ ಕಾಂಬಳೆ ಬೆಳಗಾವಿ
ಬೈಲಹೊಂಗಲ:ಜಾರ್ಕಂಡದಲ್ಲಿ ಇರುವ ಜೈನರ ಪವಿತ್ರ ಸ್ಥಳ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡಲು ಹೊರಟ ಸರ್ಕಾರದ ನಡೆ ಖಂಡಿಸಿ ಬೈಲಹೊಂಗಲದಲ್ಲಿ ಜೈನ ಧರ್ಮದವರು ಆಂದೋಲನ ನಡೆಸಿದರು
ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕ್ಷೇತ್ರದ ಯತಾಸ್ತಿತಿ ಉಳಿಸಿ ಅದರ ಪವಿತ್ರತೆ ಕಾಪಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ…..
ಜೈನ ಧರ್ಮ ದೇಶಕ್ಕೆ ತನ್ನದೇ ಆದ ಸಾಹಿತ್ಯ, ಶಿಲ್ಪದ ಕೊಡುಗೆಯ ಜೊತೆಗೆ ಅಹಿoಸಾ ತತ್ವವನ್ನು ಇಡೀ ದೇಶಕ್ಕೆ ಸಾರಿದ ಧರ್ಮವಾಗಿದೆ….
ಈ ಪುಣ್ಯ ಕ್ಷೇತ್ರಕ್ಕೆ ಬರಿಗಾಲಿನ ಮುಖಾಂತರ ಹೋಗಿ ದರ್ಶನ ಪಡೆದ ಮಾನವ ಜನ್ಮ ಸ್ವಾರ್ತಕ ಎಂಬ ನಂಬಿಕೆ ಇಟ್ಟಿದ್ದೇವೆ…..
ಇಪ್ಪತ್ತು ತೀರ್ತಂಕರರು ನಿರ್ವಾಣ ಹೊಂದಿದ ಪವಿತ್ರ ಕ್ಷೇತ್ರ ಸಮ್ಮೆದ ಶಿಖರ್ಜಿಯಾಗಿದ್ದು …..
ಈ ಕ್ಷೇತ್ರದವನ್ನು ಪ್ರವಾಸಿ ತಾಣ ವಾಗಿಸಿಸುವದರಿಂದ ಅಲ್ಲಿ ಅನೇಕ ಅಹಿತರ ಚಟುವಟಿಕೆ ನಡೆಯಬಹುದು ಇದರಿಂದ ಶಿಖರ್ಜಿಯ ಪಾವಿತ್ರ್ಯತೆಗೆ ದಕ್ಕೆ ಬರಲಿದೆ….
ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಕಾರ ಜೈನ ಧರ್ಮದ ಮುಖಂಡರನ್ನು ಕರೆದು ಅಭಿಪ್ರಾಯ ತಿಳಿದುಕೊಳ್ಳಬೇಕಿತ್ತು ಆದರೆ ಚುನಾಯಿತ ಪ್ರತಿನಿಧಿಗಳು ಏನನ್ನು ಕೇಳದೆ ಇಂತಹ ನೀಚ ಕೆಲಸಕ್ಕೆ ಇಳಿದಿರುವದು ಸರಿಯಲ್ಲ….
ಇದನ್ನು ಬಿಟ್ಟು ಅಲ್ಲಿ ರೆಸಾರ್ಟ್ ಹಾಗೂ ಪ್ರವಾಸಿ ತಾಣ ನಿರ್ಮಾಣ ಮಾಡುವುದರಿಂದ ದುಶ್ಚಟಗಳ ತಾನವಾಗಲಿದ್ದು ಈ ನಿರ್ಧಾರ ಸರಿ ಅಲ್ಲಾ ಎಂದು ಈ ಮೂಲಕ ತಿಳಿಸಿದ್ದಾರೆ…
ಸರಕಾರಕ್ಕೆ ಕ್ಷೇತ್ರದ ಬಗ್ಗೆ ಕಾಳಜಿ ಇದ್ದರೆ ಅಲ್ಲಿಗೆ ಬರುವ ಭಕ್ತರಿಗೆ ಉಳಿದುಕೊಳ್ಳಲು ಸಮಸ್ಯೆ ಇದ್ದು ಯಾತ್ರಿ ನಿವಾಸ ನಿರ್ಮಾಣ ಮಾಡಲಿ……