*ಅಥಣಿಯ ಗಚ್ಚಿನಮಠಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ*

Share the Post Now

ವರದಿ:ಸಚಿನ ಕಾಂಬ್ಳೆ ಕಾಗವಾಡ

ಅಥಣಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಹಿರಿಯ ಪತ್ರಕರ್ತ ಗುರುರಾಜ ಹೂಗಾರ ಅವರು ಇಂದು ಅಥಣಿಯ ಗಚ್ಚಿನಮಠದಲ್ಲಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆ ದರ್ಶನ ಪಡೆದು ನಂತರ ಮೋಟಗಿಮಠಕ್ಕೆ ಭೇಟಿ ನೀಡಿ ಪ. ಪೂ. ಪ್ರಭುಚನ್ನ ಬಸವ ಸ್ವಾಮೀಜಿ ಅವರಿಂದ ಮತ್ತು ಅಥಣಿ ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಂದ ಸನ್ಮಾನ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು ಬರುವ ಜನೆವರಿ 9 ಮತ್ತು 10ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಪೂರ್ವಭಾವಿ ಸಭೆಗಳನ್ನು ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಿ.ಎ ಇಟ್ನಾಳಮಠ, ಅಣ್ಣಾಸಾಹೆಬ ತೆಲಸಂಗ, ವಿಜಯಕುಮಾರ ಅಡ್ಡಹಳ್ಳಿ, ಪರಶುರಾಮ ನಂದೇಶ್ವರ, ರಾಜು ಗಾಲಿ, ರಮೇಶ ಬಾದವಾಡಗಿ, ರಾಕೇಶ್ ಮೈಗೂರ, ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!