ವರದಿ ರವಿ ಬಿ ಕಾಂಬಳೆ ಹುಕ್ಕೇರಿ
ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿರುವ ವಿಶ್ವರಾಜ ಕಾರ್ಯಾಲಯದಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಬಿಜೆಪಿ ಯುವ ಘಟಕದ ಕಾರ್ಯಕಾರಣಿ ಸಭೆ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ ನೇರ್ಲಿ ಹಾಗೂ ಪದಾಧಿಕಾರಿಗಳು
ಬರುವಂತ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಚುನಾವಣೆ ಬಾಕಿ ಉಳಿದಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಭೂತ ಮಟ್ಟದಲ್ಲಿ ಸಂಘಟನಾತ್ಮಕ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಯುವ ಕಾರ್ಯಕರ್ತರ ಕಾರ್ಯಕಾರಣಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪವನ ಕತ್ತಿ ಹಾಗೂ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ ನೇರ್ಲಿ ಮಾತನಾಡಿ
ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕು ನಮ್ಮ ಕ್ಷೇತ್ರ ಹಾಗೂ ಇತರ ಕ್ಷೇತ್ರದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನೆಮನೆಗೆ ಹೋಗಿ ಮನವರಿಕೆ ಮಾಡಿಕೊಡಬೇಕು ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಕೆರೆಗಳಿಗೆ ನೀರು ತುಂಬಿಸುವುದು ಬ್ರಿಜ್ ಮತ್ತು ಬಾಂಧಾರ ದಂತ ಸಾಕಷ್ಟು ಕೆಲಸ ಮಾಡಿದ್ದು ಹಾಗೂ ಮಾನವತವಾದವು ಬಿಜೆಪಿಯ ಅಧಿಕೃತ ಸಿದ್ದಾಂತವಾಗಿದ್ದು ಪಕ್ಷವು ಸಾಮಾಜಿಕ ಸಂಪ್ರದಾಯಕವಾದ ಮತ್ತು ರಾಷ್ಟ್ರೀಯತಾವಾದ ತತ್ವಗಳ ಮೇಲೆ ಕೇಂದ್ರೀಕೃತವಾಗಿದೆ
ತಮಗೆ ನೀಡಿದ ಜವಾಬ್ದಾರಿ ಪಕ್ಷ ನೀಡಿದ ಕಾರ್ಯಕ್ರಮಗಳನ್ನು ಎಲ್ಲಾ ಮನೆಮನೆಗೆ ತಿಳಿಹೇಳಿ ಜಿಲ್ಲೆಯಲ್ಲಿರುವ 18 ಕ್ಷೇತ್ರಗಳಲ್ಲಿಯ ತಮ್ಮ ಸಂಬಂಧಿಕರಿಗೆ ತಾವು ಬಿಜೆಪಿಯ ಕಾರ್ಯಕ್ರಮದ ಬಗ್ಗೆ ಹೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ ನೆರ್ಲಿ ರೈತ ಮೋರ್ಚ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪವನ ಕತ್ತಿ ಮುಖಂಡರಾದ ಕಲಗೌಡ ಪಾಟೀಲ. ಜಯಗೌಡ ಪಾಟೀಲ. ಸುನಿಲ್ ಪರ್ವತರಾವ. ಬಸವರಾಜ ಮಟಗಾರ. ರಾಯಪ್ಪ ಡೂಗ. ಮಹಾವೀರ ನಿಲಜಿಗಿ. ಪರಗೌಡ ಪಾಟೀಲ. ರವಿ ಹಿಡಕಲ. ಸುಹಾಸ ನೂಲಿ. ಪ್ರಜ್ವಲ ನಿಲಜಿಗಿ. ರಾಜೇಶ ಮುನ್ನೋಳಿ. ಹಾಗೂ ಬಿಜೆಪಿ ಹುಕ್ಕೇರಿ ಮಂಡಲದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.