ಬೆಳಗಾವಿ:ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದವೆಂದರೆ ಅದು ಹಾರೂಗೇರಿ
ಇಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇದ್ದು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ನ್ನು ಕೈ ಬೀಸಿ ಕರೆಯುತ್ತಿರುವ ವಿದ್ಯಾಕಾಸಿ ಹಾಗೂ ದೈನಂದಿನ ವ್ಯವಹಾರ ಕೇಂದ್ರ ಬಿಂದು ಕೋಟ್ಯಂತರ ರೂಪಾಯಿಗಳ ನಡೆಯುವ ಪಟ್ಟಣ ಇದಾಗಿದೆ
ಹಲವಾರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾದನೆಯನ್ನ ಮಾಡಿದ್ದಾರೆ ಆದರೆ ಪಟ್ಟಣದ ಸುತ್ತಮುತ್ತ ಗ್ರಾಮಗಳ ಪ್ರಯಾಣಿಕರ ಹಾಗೂ ಸಾರ್ವಜನಿಕರ ಬೇಡಿಕೆ ಏನಾಗಿತ್ತೆದಂದ್ರೆ ಸುಸಜಿತ್ತವಾದ ಬಸ್ ನಿಲ್ದಾಣದ ಅವಶ್ಯಕತೆ ಇತ್ತು
ಇವತ್ತು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಗೆ ಬೆಳಗಾವಿಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ,ಸಾರಿಗೆ ಸಚಿವ ಬಿ ಶ್ರೀರಾಮುಲು ರಾಯಬಾಗ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಹಾಗೂ ಕುಡಚಿ ಮತಕ್ಷೇತ್ರ ದ ಶಾಸಕ ಹಾಗೂ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪಿ ರಾಜೀವ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು
ಇದೆ ಸಂದರ್ಭದಲ್ಲಿ ಹಾರೂಗೇರಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಮನೆಯ ಹಕ್ಕು ಪತ್ರ ಗಳನ್ನು ವಿತರಿಸಲಾಯಿತು ,ಕುಡಚಿ ,ಮುಗಳಖೋಡ ಹಾರೂಗೇರಿ ಪುರಸಭೆಗಳಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ಹಲವರನ್ನು ಸರಕಾರಿ ನೌಕರರೆಂದು ಪರಿಗನಿಸಿ ನೇಮಕಾತಿ ಆದೇಶ ಪತ್ರಗಳನ್ನು ಸಚಿವರ ಮುಕಾಂತರ ಶಾಸಕರು ನೀಡಿದರು
ಈ ಸಂದರ್ಭದಲ್ಲಿ KSRTC ಅಧಿಕಾರಿಗಳು, ಸಿಂಬದಿಗಳು ಪುರಸಭೆಯ ಸದಸ್ಯರು,ಅಧಿಕಾರಿ ವರ್ಗ ,ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಾರೂಗೇರಿ ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು
Editor:kareppa s kamble