ಅಂಗನವಾಡಿ ನೌಕರರ ಸಮಸ್ಯೆಗೆ ಸ್ಪಂದಿಸಲಿ

Share the Post Now


ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಿ | ಅಂಗನವಾಡಿ ಯೋಜನೆ ಬಲಪಡಿಸಲು ಮುಂದಾಗಿ

ಎಸಿ ಕಛೇರಿ ಮುಂದೆ ಧರಣಿ, ಮನವಿ

ಜಮಖಂಡಿ: ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹತ್ತು-ಹಲವಾರು ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ನಗರದ ಎ.ಜಿ.ದೇಸಾಯಿ ವ್ರತ್ತದಿಂದ ಮಿನಿ ವಿಧಾನಸೌದದವರೆಗೆ ಬ್ರಹತ ಪ್ರತಿಭಟನಾ ಮೆರವಣಿಗೆ ನಡೆಸಿ ಎಸಿ ಕಛೇರಿ ಮುಂದೆ ಕೆಲಕಾಲ ಧರಣಿ ನಡೆಸಿ,ಉಪವಿಭಾಗಾಧಿಕಾರಿ ಡಾ:ಸಿದ್ದು ಹುಲ್ಲೋಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಾಧ್ಯಕ್ಷೆ ಕಸ್ತೂರಿ ಅಂಗಡಿ ಜೈನಾಪೂರ ಪ್ರತಿಭಟನಾಕಾರರನ್ನುಧೇಶಿಸಿ ಮಾತನಾಡಿ, ಡಿ ನೌಕರರ ಸೇವಾಭದ್ರತೆ,ಮಾಸಿಕ ವೇತನ,ನಿವ್ರತ್ತಿ ಪಿಂಚಣಿ ಹಾಗೂ ಇನ್ನಿತರ ಸಮಸ್ಯೆಗಳು ಹಾಗೂ ಸಹಾಯಕಿಯರು ಬಹಳ ದಿನಗಳಿಂದಲೂ ಸೇವೆ ಸಲ್ಲಿಸುತ್ತಿದ್ದವರೂ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೇ ಇರುವುದರಿಂದ ಅವರಿಗೆ ಮಾಸಿಕ ವೇತನ,ಪಿಂಚಣಿ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ.ಇಂದಿನ ಬೆಲೆ ಏರಿಕೆ ದಿನಮಾನದಲ್ಲಿ ಈಗಿನ ಸಂಬಳ ಯಾತಕ್ಕೂ ಸಾಲದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು.ಸಾಲಗಾರರಾಗುವ ಪರಿಸ್ಥಿತಿ ಯಾಗಿದೆ.ಈ ಮೊದಲು ಇವರಿಗೆ ನಿಯೋಜನೆ ಯಾದ ಕೆಲಸಗಳನ್ನು ಬಿಟ್ಟು ಗ್ರಾಪಂ ಯೋಜನೆಗಳು, ಜಿಲ್ಲಾಧಿಕಾರಿ ಹಾಗೂ ಶಾಸಕರಗಳನ್ನು ಸಹ ಅಂಗನವಾಡಿ ನೌಕರರಿಂದಲೇ ಮಾಡಿಸಲಾಗುತ್ತದೆ.ಇದರೊಂದಿಗೆ ಹೊಸದಾಗಿ ಮೊಬೈಲ್ ಆಧಾರಿತ ಕೆಲಸಗಳು ಸೇರಿ ಕೊಂಡು ಒತ್ತಡಕ್ಕೆ ಸಿಲುಕಿದ್ದಾರೆ.ಅಂಗನವಾಡಿ ಕಾರ್ಯ ಕರ್ತೆಯರನ್ನು 3 ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು. ಇಲ್ಲವೇ ಈ ಕಾರ್ಯಕರ್ತೆಯರಿಗೆ ರೂ 35, 000 ಮತ್ತು ಸಹಾಯಕಿಯರಿಗೆ 31,000 ಸಾವಿರ ಮಾಸಿಕ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರನ್ನು ಸರ್ಕಾರದ ಸಿ ಮತ್ತು ಡಿ ಗ್ರುಪ್ ನೌಕರರೆಂದು ಪರಿಗಣಿಸಿ,ಇಲಾಖೆಯು ಈ ವ್ರಂದಗಳ ನೌಕರರಿಗೆ ನೀಡುವ ಎಲ್ಲ ಶಾಸನಬದ್ದ ಸೌಕರ್ಯಗಳನ್ನು ನೀಡಬೇಕು. ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು.ಅಲ್ಲಿಯವರೆಗೂ ಇಡುಗಂಟು ರೂ,5 ಲಕ್ಷ ಮಾಡಬೇಕು. ಇಗಾಗಲೆ ನಿವ್ರತ್ತಿಯಾದ ನೌಕರರಿಗೆ ನಿವ್ರತ್ತಿ ಪರಿಹಾರಗಳು ಸಿಗುತ್ತಿಲ್ಲ.ಈ ಸಮಸ್ಯೆಯನ್ನು ಪರಿಹಾರ ಸರಳವಾಗಿ ನಿವ್ರತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಿ,ಮೂಲ ಯೋಜನೆಯನ್ನು ಎನ ಇ ಪಿ- 2020 ನೀತಿಯಂತೆ ಬದಲಾಯಿಸುವ ರಾಜ್ಯ ಸರ್ಕಾರದ ಯಾವುದೇ ಕ್ರಮವನ್ನು ಕೈ ಬಿಡಬೇಕು. ಅಂಗನವಾಡಿ ಯೋಜನೆಯನ್ನು ಬಲಪಡಿಸಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸರೋಜ ಮಾಳಿ,ಮಾಲಾಬಾಯಿ ಮುಳಿಕ,ಮಹಾದೇವಿ ಗುಣದಾಳ,ಲಕ್ಷ್ಮೀಬಾಯಿ ಕೊಣ್ಣೂರ, ಭರತಿ ತಪ್ಪೆ,ದ್ರಾಕ್ಷಾಯಣಿ ನಂದೇಶ್ವರ,ಛಾಯಾ ಮಾಳಿ,ಇಂದುಮತಿ ಮಠಪತಿ,ಸುಕನ್ಯಾ ಹೊಳೆನ್ನವರ,ಸತ್ತೆವ್ವಾ ದೊಡಮನಿ,ಶಾಂತಾ ಕುಂಚನೂರ,ಯಮನವ್ವಾ ದರಮಟ್ಟಿ,ಗಂಗೂ ಬಿರಾದಾರ,ಸುಮಿತ್ರಾ ಗುಗ್ಗರಿ,ಸಾವಿತ್ರಿ ಯಲ್ಲಟ್ಟಿ,ನಿರ್ಮಲಾ ನಿಡೋಣಿ,ರೋಹಿಣಿ ಮನಗೂಳಿ,ಭಾರತಿ ಬಿರಾದಾರ,ಇನ್ನೂ ಅನೇಕರು ಪಾಲ್ಗೊಂಡಿದ್ದರು.

ವರದಿ. ರವಿ ಬಿ ಕಾಂಬಳೆ

Leave a Comment

Your email address will not be published. Required fields are marked *

error: Content is protected !!