ಪರಮಾತ್ಮನನ್ನು ಅರಿತು ನಡೆದರೆ ಸುಂದರ ಬದುಕು ಸಾಧ್ಯ: ಪ್ರಭುಜಿ ಮಹಾರಾಜರು.

Share the Post Now


ಇಂಚಗೇರಿ ಸಾಂಪ್ರದಾಯದ ಸದ್ಗುರುಗಳ ಸಪ್ತಾಹ ಕಾರ್ಯಕ್ರಮ….



ದಾಸಬೋಧ, ಭಾರಭಂಗ, ಆರತಿ, ಮಂಗಳಾರತಿ, ಪುಷ್ಪವೃಷ್ಠಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು….

ವರದಿ: ಸಂಗಮೇಶ ಹಿರೇಮಠ.



ಮುಗಳಖೋಡ: ಭಾರತ ದೇಶ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಅನುಷ್ಠಾನಗೊಳಿಸಿದ ದೇಶ. ಇಲ್ಲಿ ಶ್ರಾವಣ ಮಾಸ ಪವಿತ್ರ ಮಾಸವೆಂದು ದೇವಾನುದೇವತೆಗಳನ್ನು ಪೂಜಿಸಿ ಆರಾಧಿಸುವುದು ಆಚರಣೆಯಾಗಿದೆ. ನಾವು ಸ್ವಾರ್ಥ, ಆಸೆ-ಅಭಿಲಾಷೆ, ಕೆಟ್ಟ ವಿಚಾರಗಳನ್ನು ಬಿಟ್ಟು ಧ್ಯಾನ ಮಾಡುತ್ತಾ ನಡೆದರೆ ದೇವರು ಕಾಣಿಸುವನು ಎಂದು ಹಿಪ್ಪರಗಿ ಮಠದ ಪೀಠಾಧ್ಯಕ್ಷರಾದ ಪ್ರಭುಜಿ ಮಹಾರಾಜರು ಹೇಳಿದರು.

ಅವರು ಪಟ್ಟಣದ ಮಾಧವಾನಂದ ಆಶ್ರಮದಲ್ಲಿ ನಡೆದ ಕ್ಷೇತ್ರ ಇಂಚಗೇರಿ ಸಾಂಪ್ರದಾಯದ ಸದ್ಗುರುಗಳ ಸ್ಮರಣಾರ್ಥವಾಗಿ ನಡೆದ ಸಪ್ತಾಹ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿ ಬದಲಾವಣೆ ಜಗದ ನಿಯಮ ಈ ಬದಲಾವಣೆಯಲ್ಲಿ ಬದುಕು ಕಟ್ಟಿಕೊಳ್ಳಬೇಕಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ ಬಹಳ ಅವಶ್ಯಕ. ಜೀವನ ಶಾಶ್ವತವಲ್ಲ, ಮೋಕ್ಷ ಹೊಂದಬೇಕಾದರೆ ನಮ್ಮ ಪ್ರತಿ ಹೆಜ್ಜೆಯಲ್ಲಿಯು ದೇವರ ನಾಮಸ್ಮರಣೆಯಿಂದ ಕೆಲಸ ಕಾರ್ಯ, ಸತ್ಸಂಗ ಮಾಡುತ್ತಾ ಧ್ಯಾನದಿಂದ ನಮ್ಮ ನಮ್ಮ ದೈನಂದಿನ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಶ್ರೀ ಅರವಿಂದ ಮಗದುಮ ವಕೀಲರು ದಾಸಬೋಧ ಪೂಜಿಸಿ, ಪಟಿಸಿ, ವಿವರಿಸಿದರು.

ಗುಂಡೇವಾಡಿಯ ನಾಗಪ್ಪ ಜತ್ತಿ ಮಹಾರಾಜರು, ನೂರ್ ಜಹಾನ್ ಮಾತಾ, ಮಾರಾಪೂರಿನ ಶ್ರೀಮಂತ ಮಹಾರಾಜರು, ಪಾಲಭಾವಿಯ ಗಿರಿಮಲ್ಲ ಮಹಾರಾಜರು ಸಾಂಪ್ರದಾಯ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಡಚಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಹೇಂದ್ರ ತಮ್ಮಣ್ಣವರ್ ಅವರನ್ನು ಮಾಧವಾನಂದ ಆಶ್ರಮದ ಕಮೀಟಿಯವರು ಶಾಲು ಹೊದಿಸಿ ಸತ್ಕರಿಸಿದರು.

ಕೂಡಿದ ಭಕ್ತ ಸಮೂಹ ದಾಸಬೋಧ, ಭಾರಭಂಗ, ಆರತಿ, ಮಂಗಳಾರತಿ ಯೊಂದಿಗೆ ಸದ್ಗುರುಗಳಿಗೆ ಪುಷ್ಪವೃಷ್ಟಿ ಮಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಈ ಸಂದರ್ಭದಲ್ಲಿ ಸಂಗಪ್ಪ ಜಂಬಗಿ, ಮಹಾದೇವ ಬಾಳೋಜಿ, ಲಕ್ಷ್ಮಣ್ ಗೋಕಾಕ್, ಸಿದ್ದಪ್ಪ ಜತ್ತಿ, ಗೋಪಾಲ್ ಯಡವಣ್ಣವರ, ಪರಪ್ಪ ಡುಮ್ಮಿ, ಸಂಗಪ್ಪ ಬಾಳೋಜಿ, ಶಿವಪುತ್ರ ಜಂಬಗಿ ಸೇರಿದಂತೆ ಮುಗಳಖೋಡ ಪಟ್ಟಣದ ಹಾಗೂ ಸುತ್ತಮುತ್ತಲಿನ ಇಂಚಗೇರಿ ಸಾಂಪ್ರದಾಯದ ಎಲ್ಲ ಭಕ್ತ ಸಮೂಹದವರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!