**
ವರದಿ:- ರಾಜಶೇಖರ ಶೇಗುಣಸಿ
ಬೆಳಗಾವಿ
ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಇಂಗ್ಲೀಷ್ ಶಿಕ್ಷಕರ ಸಂಘದಿಂದ ನೆಟ್, ಸೆಟ್ ಪರೀಕ್ಷೆಯ ತರಬೇತಿಯ ಕಾರ್ಯಗಾರವನ್ನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ನೆಟ್, ಸೆಟ್ ಪರೀಕ್ಷೆಯ ಪೂರ್ವ ತಯಾರಿ, ಸಮಯ ಪ್ರಜ್ಞೆ ಹಾಗೂ ಬ್ರಿಟಿಷ್ ಸಾಹಿತ್ಯದ ವ್ಯಾಪ್ತಿ ಕುರಿತು ಡಾ. ಅನಂತಪದ್ಮನಾಭ ಅವರು ಅಲ್ಪ ಸಮಯದಲ್ಲಿ ಸೆಟ್ ಮತ್ತು ನೆಟ್ ಯಾವ ರೀತಿ ಪಾಸಾಗಬೇಕು ಹಾಗೂ ಯಾವ ಯಾವ ಪುಸ್ತಕಗಳನ್ನು ಓದಬೇಕು ಹಾಗೂ ಒಂದು ದಿನಕ್ಕೆ ಸುಮಾರು ಎಂಟರಿಂದ ಹತ್ತು ತಾಸುಗಳ ನಿರಂತರ ಅಧ್ಯಯನ ಮಾಡಿದರೆ ಯಾವ ಪರೀಕ್ಷೆ ಬೇಕಾದ್ರೂ ಪಾಸಾಗಬಹುದು ಎಂಬುದರ ಬಗ್ಗೆ ಬಹಳ ಮಾರ್ಮಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಚವಿವಿ ಇಂಗ್ಲೀಷ್ ಸಂಘದ ಕಾರ್ಯದರ್ಶಿಗಳಾದ ಡಾ. ಎಸ್. ಬಿ. ಬಿರಾದಾರ ಇವರು ಮಾತನಾಡುತ್ತಾ ಇಂಗ್ಲೀಷ್ ಸಾಹಿತ್ಯದ ಸಂಕೀರ್ಣತೆ, ಅಗತ್ಯ ಪುಸ್ತಕಗಳು, ಓದುವ ರೀತಿ, ವಿಶ್ಲೇಷಣಾತ್ಮಕ ಕೌಶಲ್ಯಗಳು, ಏಕಾಗ್ರತೆ, ಗುರಿ ನಿರ್ಧರಿಸುವಿಕೆ ಕುರಿತು ಮಾತನಾಡಿದರು. ಷೇಕ್ಸ್ ಪಿಯರ್, ಮಿಲ್ಟನ್ ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಅಧ್ಯಯನ ಇವೆಲ್ಲವುಗಳ ಆಳವಾದ ಅಧ್ಯಯನದಿಂದ ನೆಟ್ ಸೆಟ್ ಪರೀಕ್ಷೆ ಪಾಸಾಗಲು ಸಾಧ್ಯ ಎಂದು ಇಂಗ್ಲಿಷ್ ವಿಭಾಗದ ಚೇರ್ಮನ ಆದ ಪ್ರೊ. ಮಾಳಗಿಯವರು ಹೇಳಿದರು. ಕಾರ್ಯಕ್ರಮದಲ್ಲಿ ರುಕ್ಟಾ ಅಧ್ಯಕ್ಷ ಪ್ರೊ. ಎಮ್. ಎ. ಬಿರಾದಾರ್, ಪ್ರಾಧ್ಯಾಪಕರಾದ ಎಂ. ಐ ಬಿರಾದಾರ್, ರಾಜು ಶೇಗುಣಸಿ, ಅರುಣ್ ಲೋಕರೆ, ಉಪಸ್ಥಿತರಿದ್ದರು. ಡಾ. ತೆಗ್ಗಿಹಳ್ಳಿ ಸ್ವಾಗತಿಸಿದರು. ಡಾ.ಗೋಲಗೊಂಡ ವಂದಿಸಿದರು.