ವರದಿ: ಸಂಜೀವ ಬ್ಯಾಕುಡೆ, ರಾಯಬಾಗ
ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜೈನ ಬಸದಿ ಹತ್ತಿರ ರೆಹಮಾನ್ ಫೌಂಡೇಶನ್, ಕುಡಚಿ ಹಾಗೂ ಮುಮ್ತಾಜ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಸಹಯೋಗದಲ್ಲಿ ಉಚಿತ ಡೆಂಟಲ್ ಮತ್ತು ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಫೌಂಡೇಶನ್ ಅಧ್ಯಕ್ಷ ಮೌಲಾನಾ ವಾಸೀಕ ಹಾಗೂ ಗಣ್ಯರು ಚಾಲನೆ ನೀಡಿದರು.
ನಂತರ ಮಾತನಾಡಿದ ಮೌಲಾನಾ ಇವತ್ತಿನ ಆಧುನಿಕ ಜಗತ್ತಿನಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡದೇ ಅಂದ ಚೆಂದದ ಹಾಗೂ ಫಾಸ್ಟ್ಫುಡಗೆ ಮಾರು ಹೋಗಿದ್ದೇವೆ ಆದ್ದರಿಂದಲೇ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದೇವೆ ಇನ್ನಾದರೂ ನಾವು ಎಚ್ಚೆತ್ತುಕೊಂಡು ಒಳ್ಳೆಯ ಆಹಾರ ವಿಹಾರ ರೂಢಿಸಿಕೊಂಡು ಒಳ್ಳೆಯ ಆರೋಗ್ಯವನ್ನು ಪಡೆಯೋಣ ಜನರಿಗೆ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಮ್ಮ ರೇಹಮಾನ ಫೌಂಡೇಶನ್ ಮಾಡುತ್ತಿದೆ ಎಂದರು.
ಶಿಬಿರದಲ್ಲಿ ದಂತ ಮತ್ತು ಬಾಯಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ಹಲ್ಲಿನ ಕಾಯಿಲೆ ಮತ್ತು ಬಾಯಿಯ ಕ್ಯಾನ್ಸರ್‌ನ ಆರಂಭಿಕ ರೋಗನಿರ್ಣಯ. ಉಚಿತ ದಂತ ಮತ್ತು ವೈದ್ಯಕೀಯ ತಪಾಸಣೆ, ಎಕ್ಸ್-ರೇ, ಇತರೆ ಚಿಕಿತ್ಸೆ ಹಾಗೂ ಉಚಿತ ಔಷಧಿ ವಿತರಿಸಲಾಯಿತು.
ಸುಮಾರು 250ಕ್ಕೂ ಹೆಚ್ಚು ರೋಗಿಗಳು ಭಾಗಿಯಾಗಿ ಶಿಬಿರದ ಲಾಭ ಪಡೆದರು.
ಶಿಬಿರದಲ್ಲಿ ರೆಹಮಾನ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ವಾಸೀಕ, ಡಾ. ಮುಜಾಹೀದ ಅಜೀಜಖಾನ, ಶಬ್ಬೀರ ಮಕ್ತುಂಬಡೆ,ದಾದೇಪಾಶಾ ಜಿನಾಬಡೆ, ಮುಜಾಹೀದ ಸಂದರವಾಲೆ ಆರೀಫ ಜಮಾದಾರ, ಡಾ.ಸಯೆದಾಫಾತೀಮಾ ಡಾ. ಸುಮಯ್ಯಾ, ಇತರ ಸಿಬ್ಬಂದಿ ಭಾಗಿಯಾಗಿದ್ದರು.