ಕುಡಚಿ ಲವ್ ಡೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿನ್ನರ ಆಹಾರ ಮೇಳ ಜರುಗಿತು.

Share the Post Now

ಬೆಳಗಾವಿ


ಮಕ್ಕಳಲ್ಲಿ ಆಹಾರ ಜ್ಞಾನ, ವ್ಯವಹಾರ ಜ್ಞಾನ ಅರಿವು ಮೂಡಿಸುವ ಒಂದು ಪ್ರಯತ್ನದಲ್ಲಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ‌.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಲವ್ ಡೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿನ್ನರ ಆಹಾರ ಮೇಳ ಜರುಗಿತು.

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದಿ ಮಾತಿನಂತೆ ಮಕ್ಕಳಿಗೆ ಯಾವ ಯಾವ ಆಹಾರ ಸೇವನೆಯಿಂದ ವಿವಿಧ ಬಗೆಯ ಪ್ರೋಟಿನ್, ಪೋಷಕಾಂಶಗಳು ದೊರೆಯುತ್ತವೆ ಎಂಬ ಭಾವನೆ ಇಟ್ಟುಕೊಂಡು ಸುಮಾರು 30 ಆಹಾರ ಅಂಗಡಿಗಳಲ್ಲಿ 40 ಬಗೆಯ ಆಹಾರ ಅಂಗಡಿಗಳು, 4 ಮನೋರಂಜನೆ ಆಟಗಳ ಸೇರಿರುವ ಆಹಾರ ಮೇಳವನ್ನು ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಆಶಾ ಘಾಟಗೆ, ಸಾಗರ ಘಾಟಗೆ ಹಾಗೂ ರಕ್ಷಿತಾ ಘಾಟಗೆ ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ನಂತರ ಎಡೆಬಿಡದೆ ಎಲ್ಲ ಆಹಾರ ಅಂಗಡಿಗಳಿಗೆ ಭೇಟಿ ನೀಡುವುದರೊಂದಿಗೆ ಆಹಾರ ರುಚಿ ಸವಿದು, ಮಕ್ಕಳಿಂದ ಅವರು ತಯಾರಿಸಿದ ಆಹಾರ ಬಗ್ಗೆ ಮಾಹಿತಿ ಪಡೆದರು.

ಈ ಆಹಾರ ಮೇಳದಲ್ಲಿ ಕಚೋರಿ, ಪಾನಿಪುರಿ, ಆಯಿಸಕ್ರೀಮ, ಭೇಳ, ಥಾಲಿಪಟ್ಟಿ, ಹಲ್ವಾ, ಮಜ್ಜಿಗೆ, ಲಸ್ಸಿ, ಸುಮಾರು 40ಬಗೆಯ ಆಹಾರಗಳನ್ನು ಮಕ್ಕಳು ಅಂಗಡಿಗಳಲ್ಲಿ ಇಟ್ಟು ಮಕ್ಕಳು ಸುಮಾರು ನಾಲ್ವತ್ತು ಸಾವಿರ ಮೊತ್ತದ ಆಹಾರ ತಯಾರಿಸಿ ಖರ್ಚುವೆಚ್ಚ ತೆಗೆದು ನಾಲ್ಕು ಸಾವಿರ ಆದಾಯ ಗಳಿಸಿರುವುದು ಕಂಡುಬಂತು.


ಈ ಸಮಯದಲ್ಲಿ ತಾಲೂಕಾ ಪಂಚಾಯತ್ ಇಓ ಸುರೇಶ ಕದ್ದು, ಪ್ರಾಂಶುಪಾಲರಾದ ಎ.ಎಸ.ಕಾಂಬಳೆ, ಎಮ.ಎನ.ದಾನಣ್ಣವರ, ಮುಖ್ಯೋಪಾಧ್ಯಾಯರಾದ ಡಾ.ಲಕ್ಷ್ಮಣ ಚೌರಿ, ಆಶಾ ಗಾಡಿವಡ್ಡರ, ಕಾರ್ಯದರ್ಶಿ ಸುಭಾಷ್ ಕುಸನಾಳೆ, ಬಾಬಾಲಾಲ ಪಿನಿತೋಡ, ಯಲ್ಲಪ್ಪ ವಡ್ಡರ, ಇರ್ಫಾನ್ ತರಡೆ ಇತರರು ಉಪಸ್ಥಿತರಿದ್ದರು.

ವರದಿ: ಸಂಜೀವ ಬ್ಯಾಕುಡೆ,

Leave a Comment

Your email address will not be published. Required fields are marked *

error: Content is protected !!