ಹಳ್ಳೂರ .ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರಲ್ಲಿ ಒಂದರಿಂದ ಎಂಟನೇ ತರಗತಿ 600ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು 2024ರ ನೂತನ ವರ್ಷಾಚರಣೆ ನಿಮಿತ್ತ ಇಲ್ಲಿನ ಪ್ರಧಾನ ಗುರುಗಳಾದ ಶ್ರೀ ಶಿವಾನಂದ ವಾಸನ ಗುರುಗಳು ಸಮ್ಮುಖದಲ್ಲಿ ಎಲ್ಲಾ ಮಕ್ಕಳ ಊಟಕ್ಕಾಗಿ ಸಿಹಿ ತಿಂಡಿಗಳು ಗೋಧಿ ಹುಗ್ಗಿ,ರೊಟ್ಟಿ ,ಬದನೆಕಾಯಿ ಪಲ್ಯ , ಸಂಡಿಗೆ, ಅನ್ನ,ಸಾರು ಮಾಡಿ ಊರಿನ ಗಣ್ಯರು ಶಿಕ್ಷಕ ವೃತ್ತಿ ಬಂಧುಗಳು ಮಕ್ಕಳಿಗೆ ಖುಷಿಖುಷಿಯಾಗಿ ಉಣಬಡಿಸಿದರು.
ಮಕ್ಕಳೆಲ್ಲ ಹೊಸ ವರ್ಷ ಸಂಭ್ರಮವನ್ನು ಪರಸ್ಪರ ಸಿಹಿ ಚಾಕಲೇಟ್ ಕೊಟ್ಟು ಅದ್ದೂರಿಯಾಗಿ ಸ್ವಾಗತಿಸಿದರು.ಈ ಸಂಧರ್ಭದಲ್ಲಿ ಪಿ ಕೆ ಪಿ ಎಸ್ ಅಧ್ಯಕ್ಷ ಸುರೇಶ ಕತ್ತಿ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಮುತ್ತಪ್ಪ ಲಿಗಾಡಿ.ಬಾಬುಲಸಾಬ ಮುಜಾವರ. ರಾಮಣ್ಣ ನಿಡೋಣಿ.ಲಕ್ಷ್ಮಣ ಶಿವಾಪೂರ.
ಸೈದುಸಾಬ.ಮುಜಾವರ.ಕಾರ್ಯಕ್ರಮದಲ್ಲಿ.ಶಿಕ್ಷಕರಾದ ಪ್ರಕಾಶ ಮೋರೆ .ಗೋವಿಂದ ಮಾದರ. ಆರ್ ಜಿ ಕುರಣಿಂಗ. ಎಸ್ ಬಾಳಂಬೀಡ. ಸುನಂದಾ ಹಳ್ಳೊಳಿ. ವಾಯ್ ಬಿ ಕಾಡಪ್ಪಗೊಳ.ಬಿ ಎಸ್ ಗುಣದಾಳ. ವಿ ಎಸ್ ಸಂತಿ. ಎಸ್ ಎಮ್ ಬೆಳ್ಳಕ್ಕಿ. ಎಸ್ ಡಿ ನಾವಿ .ಆರ್ ಎಸ್ ಮಗದುಮ. ಸೇರಿದಂತೆ ಶಿಕ್ಷಕರು , ಅಡುಗೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.