ಬೆಳಗಾವಿ.ರಾಯಬಾಗ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 385 ವಿದ್ಯಾರ್ಥಿಗಳಿಂದ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಪ್ರದರ್ಶನವನ್ನು ಜುನ್ನೇದಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಇಬ್ರಾಹಿಂ ಪಟೇಲ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ವಿಜ್ಞಾನದಲ್ಲಿ 184, ಗಣಿತದಲ್ಲಿ 76, ಸಮಾಜ ಶಾಸ್ತ್ರದಲ್ಲಿ 22, ಉರ್ದುದಲ್ಲಿ23, ಕನ್ನಡದಲ್ಲಿ 26, ಇಂಗ್ಲಿಷಿನಲ್ಲಿ 16 ಹಾಗೂ ಇತರೆ 38 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜುನ್ನೇದಿಯಾ ಶಿಕ್ಷಣ ಸಂಸ್ಥೆ ಇಬ್ರಾಹಿಂ ಪಟೇಲ್, ಪಿಎಂಶ್ರೀ ಮುಖ್ಯೋಪಾಧ್ಯಾಯ ಎಂ.ಎನ.ಪಟೇಲ, ಜಹೂರ ರೋಹಿಲೆ, ಮುಜಕೀರ ಬಾಗೆ, ಅಬುಬಕರ ಪಟೇಲ್, ಜುಬೇರ ಕರೀಮಖಾನ, ಪೀರಜಾದೆ ಸರ, ಇತರರು ಉಪಸ್ಥಿತರಿದ್ದರು.
