ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸ್ಥಳೀಯ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಸಂಸ್ಥೆಯ 75 ನೇ ಅಮೃತ ಮಹೋತ್ಸವ ಹಾಗೂ ಡಾ. ಪ್ರಭಾಕರ ಕೋರೆ ಯವರ 75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆಯ ಶಿಬಿರವನ್ನು ರಾಯಭಾಗದ ಆರ್ ವಿ ಆರ್ ಕಾಲೇಜಿನಲ್ಲಿ ದಿನಾಂಕ 27-1-2023ರಂದು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ KLE ಸಂಸ್ಥೆಯ ಪ್ರಭಾಕರ ಕೋರೆ ತಜ್ಞ ವೈದ್ಯರು ಎಲುವು, ಕಿಲು, ಮತ್ತು ಮರುಜೋಡನೆ, ಚಿಕ್ಕ ಮಕ್ಕಳ ಚಿಕಿತ್ಸೆ ನೇತ್ರ ಚಿಕಿತ್ಸೆ,ಕಿವಿ,ಮೂಗು,ಮತ್ತು ಗಂಟಲು ಚರ್ಮರೋಗ ಶ್ವಾಸಕೋಶ, ಹೃದಯ, ನರರೋಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ನ್ಯೂರೋ ರೆಡಿಯೋಲಾಜಿ ಇನ್ನು ಹಲವಾರು ರೋಗಗಳಿಗೆ ಚಿಕಿತ್ಸೆಮತ್ತು ಉಚಿತ ತಪಾಸನೆ ಮತ್ತು ಸಲಹೆಯನ್ನು ನೀಡುವರು
ಅಂಗಾಂಗ ಕಸಿ ಯೋಜನೆಗಳ ಸೌಲಭ್ಯವಿರುತ್ತದೆ
ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು
ದಿನಾಂಕ 27-1-2023 ರಂದು ಬೆಳಗ್ಗೆ 9 ರಿಂದ 2 ರವರೆಗೆ ನಡೆಯಲಿರುವ ಶಿಬಿರದ ಸದುಪಯೋಗ ಪಡೆದುಕೊಳ್ಳವಂತೆ ಬ್ಯಾರಿಸ್ಟರ್ ಶ್ರೀ ಅಮರಸಿಂಹ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.