ಬೆಳಗಾವಿ: ಜೆಲ್ಲೆಯ ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ.
ಕೋಹಳ್ಳಿ ಗ್ರಾಮದ ಗಂಗವ್ವ ಮಲ್ಲಪ್ಪ ತಳವಾರ ಅವರಿಗೆ ಸೇರಿದ ಮನೆಯ ಮೇಲ ಛಾವಣಿ ಪತ್ರಾಸ್ ಹಾರಿ ಹೋಗಿದ್ದು ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ನಾಶವಾಗಿವೆ.
ಶೋಭಾ ರಾಜು ನಾಕಮಾನ, ಮಾಹಾಂತೇಶ ಗುಡ್ಡಾಪೂರ ಸೇರಿದಂತೆ ಹಲವರ ಮನೆ ಛಾವಣಿ ಹಾರಿ ಹೋಗಿವೆ.
ಭರತ ಬಡಗರರವರ ದ್ರಾಕ್ಷೀ ಬೆಳೆಗೆ ಆಸೆರೆಯಾಗಿದ್ದ ಕಂಬಗಳು ನೆಲಕ್ಕುರುಳಿದ ಪರಿಣಾಮ ದ್ರಾಕ್ಷೀ ಬೆಳೆ ಹಾನಿಯಾಗಿದೆ.
ಯಲಹಡಗಿ, ಅಡ್ಡಹಳ್ಳಿ,ಕೋಹಳ್ಳಿ,ಐಗಳಿ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಆಣೆಕಲ್ಲು ಮಳೆಯಾಗಿದೆ






