ಬೆಳಗಾವಿ
ಹುಕ್ಕೇರಿ: ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳವರ ಆರೋಗ್ಯ ಚೆತರಿಕೆಗಾಗಿ ಹುಕ್ಕೇರಿ ಹಿರೇಮಠದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಂಪತ್ ಕುಮಾರ್ ಶಾಸ್ತ್ರಿ ಗುರುಕುಲದ ವಿದ್ಯಾರ್ಥಿಗಳಿಂದ ಮಹಾ ಮೃತ್ಯುಂಜಯ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು
ನಂತರ ಮಾತನಾಡಿದ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರು ತಮ್ಮ ಮನೆಯಲ್ಲಿ ಶ್ರೀಗಳ ಆರೋಗ್ಯ ಆಯುಷ್ಯ ಹೆಚ್ಚಲು ಮನೆಯಲ್ಲಿಯೇ ಪ್ರಾರ್ಥನೆ ಮಾಡಿ
ಇಂದು ಹಿರೇಮಠದ ಗುರುಕಲದ ವಿದ್ಯಾರ್ಥಿಗಳು ಸಿದ್ದೇಶ್ವರ ಸ್ವಾಮಿಗಳ ಆಯುಷ್ಯ ಆರೋಗ್ಯಕ್ಕಾಗಿ
ಮಹಾ ಮೃತ್ಯುಂಜಯ ಪೂಜೆಯಿಂದ ಜೀವನದ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಅವರನ್ನು ಕಾಪಾಡುತ್ತದೆ ಹಾಗೂ ಮರಣಾಂತಿಕ ರೋಗಗಳಿಂದ ಮುಕ್ತಿಯನ್ನು ನೀಡುವ ಶಕ್ತಿಯನ್ನು ಹೊಂದಿದೆ ಹಾಗಾಗಿ ನಾವಿಂದು ದೀರ್ಘಾಯುಷ್ಯಕ್ಕಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಮಾಡುವ ಮಹಾ ಮೃತ್ಯುಂಜಯ ಪೂಜೆ ಹೋಮ ಶ್ರೀಮಠ ದಲ್ಲಿ ಹಮ್ಮಿಕೊಂಡಿದ್ದು
ರೋಗ ಗುಣಪಡಿಸಿ ಅಪಮೃತ್ಯು ತಡೆಯುವ ಶಕ್ತಿ ಮೃತ್ಯುಂಜಯ ಹೋಮದಲ್ಲಿದೆ
ನಿನ್ನೆಯ ದಿನ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳಿಗೆ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದು ಶ್ರೀಗಳ ಆರೋಗ್ಯ ಸ್ವಲ್ಪ ಮಟ್ಟಿಗೆ ಏರುಪೇರಾಗಿದ್ದು ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆಂದು ಹೇಳಿದರು
ಈ ಸಂದರ್ಭದಲ್ಲಿ ಹಿರೇಮಠದ ಗುರುಕುಲದ ಎಲ್ಲಾ ವಿದ್ಯಾರ್ಥಿಗಳು ಶ್ರೀಮಠದ ಭಕ್ತರು ಉಪಸ್ಥಿತರಿದರು.
ವರದಿ ರವಿ ಬಿ ಕಾಂಬಳೆ ಹುಕ್ಕೇರಿ