ಹಳ್ಳೂರ
ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಶರೀರಕ್ಕೆ ಒಳ್ಳೆಯದು. ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವನೆ ಮಾಡಿದರೆ ರಕ್ತ ಹೀನತೆ ಉಂಟಾಗುವುದಿಲ್ಲಾ ಎಂದು ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹರಿಜನ ಹೇಳಿದರು.
ಹಳ್ಳೂರ ಗ್ರಾಮದ ಬಸವನ ಗುಡಿ ಅಂಗನವಾಡಿ ಶಾಲೆಯಲ್ಲಿ ಪೌಷ್ಠಿಕ ಆಹಾರ ಸೇವನೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ ವಿಟಮಿನ್ ಎ ಹೆಚ್ಚಾಗುವ ಆಗುವ ಆಹಾರ ಪದಾರ್ಥಗಳು ಅಂಗನವಾಡಿ ಶಾಲೆಗಳಲ್ಲಿ ದೊರೆಯುತ್ತದೆ. ಒಳ್ಳೆಯ ಆಹಾರ ಸೇವನೆ ಗರ್ಭಣಿಯರಿಗೆ ಕಜೂರು ತಪ್ಪಲ ಪಲ್ಲೆ ಗಜ್ಜರಿ ದಿನಾಲೂ ಪ್ರತಿಯೊಬ್ಬರೂ 2 ರಿಂದ 3 ಲಿಟರ್ ನೀರು ಸೇವಿಸಬೇಕು. ಅಸ್ವಚ್ಛತೆಯಿಂದ ರೋಗಗಳು ಬರುತ್ತವೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವುದು ಒಳ್ಳೆಯದು.
ಕೈ ತೋಳೆದುಕೊಳ್ಳುವ ವಿಧಾನ ಅನುಸರಿಸಿ ಕೈ ತೊಳೆದುಕೊಳ್ಳಬೇಕು.ಬಯಲು ಮಲ ವಿಸರ್ಜನೆ ಮಾಡಬಾರದು ಶೌಚಾಲಯವನ್ನೆ ಬಳಸಬೇಕು.ವಾರಕ್ಕೊಮ್ಮೆ ಕೈ ಉಗುರು ತಗೆಯಬೇಕು ಪೋಲಿಯೋ ಲಸಿಕೆ ಹಾಕಿ ಅಂಗವಿಕಲತೆ ತಡೆಗಟ್ಟಿರಿ ಹುಟ್ಟಿದ ಮಗುವಿಗೆ 24 ಗಂಟೆಯೊಳಗೆ ಕಾಮಾಲೆ ಇಂಜಕ್ಷನ್ ಸರಕಾರಿ ಆಸ್ಪತ್ರೆ ಗಳಲ್ಲೀ ಕೊಡುತ್ತಾರೆ.ಮಕ್ಕಳಿಗೇ ಅತಿಸಾರ ಬೇದೀ ಆಗದಂತೆ ಎಚ್ಚರಿಕೆ ವಹಿಸಬೇಕು ಹುಟ್ಟಿದಾಗಿನಿಂದ 16 ವರ್ಷ ತನಕ ಸರಕಾರ 12 ಮಾರಕ ರೋಗಗಳ ವಿರುದ್ಧ ಲಸಿಕೆ ಕೊಡುತ್ತಿದೆ ರೋಗಗಳನ್ನು ತಡೆಗಟ್ಟಲು ವ್ಯಾಕ್ಷಿನ ಹಾಕಿಸಿಕೊಳ್ಳಿ ಗರ್ಭಿಣಿಯರಿಗೆ ಆಹಾರ ಸೇವನೆ ಮಕ್ಕಳ ಆರೈಕೆ, ಚುಚ್ಚುಮದ್ದು, ಅತಿಸಾರ ಬೇದಿ ನಿಯಂತ್ರಣ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಈ ಸಮಯದಲ್ಲಿ ಶೈಲಾ ಬಡಿಗೇರ. ಸವಿತಾ ಕೌಜಲಗಿ. ಗಂಗವ್ವ ಬಡಿಗೇರ. ಯಮನವ್ವ ಬಡಿಗೇರ. ತಾಯವ್ವ ನಿಡೋಣಿ. ಆಶಾ ಸುಗಮಕಾರ ವಿದ್ಯಾ ರಡರಟ್ಟಿ. ಸರೋಜಿನಿ ಮುಗಳಖೋಡ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ.ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀ ಲೋಕನ್ನವರ. ಯಮನವ್ವ ಶಹಾಪೂರ. ಸಂಗೀತಾ ಬಡಿಗೇರ. ಶಮಶ್ಯಾದ ಮುಜಾವರ. ಶೋಭಾ ತೇರದಾಳ. ಗೀತಾ ಹರಿಜನ. ಪ್ರೀತೀ ಮಾಲಗಾರ. ಶಾಂತಾ ನೆಸೂರ. ಸೇರಿದಂತೆ ಅನೇಕರಿದ್ದರು.