ಕನ್ನೇರಿ ಮಠದಲ್ಲಿ ವಿಶ್ವ ಹಿಂದು ಪರಿಷತ್- ಬಜರಂಗದಳ ಹಾಗೂ ಜೊಲ್ಲೆ ಗ್ರೂಪ್ ಸಹಯೋಗದೊಂದಿಗೆ ಪುರಾಣ ಪ್ರಸಿದ್ಧ ಪುಣ್ಯಭೂಮಿ ಶ್ರೀ ಹನುಮ ಜನ್ಮಸ್ಥಳವಾದ ಅಂಜನಾದ್ರಿ ಪರ್ವತಕ್ಕೆ ಡಿಸೆಂಬರ್ 11,12,ಹಾಗೂ 13 ರಂದು ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಹನುಮಮಾಲಾ ಕಾರ್ಯಕ್ರಮದ ಪೂರ್ವಭಾವಿ ಬೈಠಕ್ ಕನ್ನೇರಿ ಮಠದ ಪ.ಪೂಜ್ಯ.ಜಗದ್ಗುರು ಅದೃಷ್ಟ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು,
ನಿಪ್ಪಾಣಿ ತಾಲೂಕಿನಿಂದ ಹನುಮ ಭಕ್ತಾದಿಗಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ಉತ್ತರ ಪ್ರಾಂತ ಅರ್ಚಕ/ ಪುರೋಹಿತ ಪ್ರಮುಖರು, ಜಿಲ್ಲಾ ಅಧ್ಯಕ್ಷರು ಆದ ಡಾ// ಆರ್.ಕೆ. ಬಾಗಿ ಜಿ,ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಗೋ ರಕ್ಷಾ ಪ್ರಮುಖರು ಹಾಗು ಬೆಳಗಾವಿ ವಿಭಾಗ ಸಹ ಕಾರ್ಯದರ್ಶಿ ಗಳಾದ ಶ್ರೀ ವಿಠ್ಠಲ್ ಜಿ,ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಧರ್ಮಾಚಾರ್ಯ ಪ್ರಮುಖರಾದ ಶ್ರೀ ವೆಂಕಟೇಶಜೀ ದೇಶಪಾಂಡೆ ಅವರು ಹಾಗು ಹನುಮ ಮಲಾಧಾರಿಗಳು ಉಪಸ್ಥಿತರಿದ್ದರು.