ಬಾಗಲಕೋಟ
ವರದಿ : ಪ್ರದೀಪ್ ದೇಶಪಾಂಡೆ
ರಬಕವಿ ಬನಹಟ್ಟಿ – ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಸ್ಲಿಂ ಸಮುದಾಯದ ಮುಖಂಡರು ಬರುವ ದಿನಾಂಕ 11-3-2023 ರಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು ಇನ್ನು ಇದೆ ಸಂದರ್ಭದಲ್ಲಿ ಮುಖಂಡ ಜಾವಿದ್ ಬಾಗವಾನ್ ಮಾತನಾಡಿ ಮುಸ್ಲಿಂ ಸಮುದಾಯದ ಜನರನ್ನ ಕೇವಲ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳಲಾಗುತ್ತಿದೆ ಹೊರತು ಇನ್ನಾವುದೇ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ನಮ್ಮ ಸಮುದಾಯ ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಹಿಂದುಳಿಯುತ್ತಾ ಬಂದಿದೆ ಇಂತಹ ಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಒಕ್ಕಟ್ಟು ಹಾಗೂ ಸಮಗ್ರ ಏಳಿಗೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು ಇನ್ನು ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು ಹಲವಾರು ಜನ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು
ಇದೆ ಸಂದರ್ಭದಲ್ಲಿ ಅಬೂಬಕ್ಕರ್ ಬಂಡೆಬುರುಜ್ , ನಗರಸಭೆ ಸದಸ್ಯ ಯುನುಸ್ ಚೌಗಲಾ ಮುಖಂಡ ಜಾವಿದ್ ಬಾಗವಾನ್ ಸೇರಿದಂತೆ. ಹಲವಾರು ಜನ ಉಪಸ್ಥಿತರಿದ್ದರು