ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು ಹಣಮಂತ ಹಾವಣ್ಣವರ

Share the Post Now


ಮೂಡಲಗಿ.

ಹಳ್ಳೂರ .ಸಮಾಜದಲ್ಲಿ ಒಬ್ಬ ಸಾಧಕ ಸಾಧನೆ ಮಾಡುತ್ತಿರುವ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸಿದರೆ ಸ್ಫೂರ್ತಿ ನೀಡಿದಂತಾಗುತ್ತದೆ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ, ಸಾಧನೆ ಮಾಡುವುವರಿಗೆ ಅಡ್ಡ ಗಾಲು ಹಾಕಿ ಅವಮಾಣಿಸದೆ ಸಹಾಯ ಸಹಕಾರ ನೀಡಬೇಕೆಂದು ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ  ಹನಮಂತ ಹಾವನ್ನವರ ಹೇಳಿದರು.


     ಅವರು ಹಳ್ಳೂರ ಗ್ರಾಮದ ಸಮಾಜ ಸೇವಕ ಪ್ರಶಸ್ತಿಗಳ ಸರದಾರ ಕಾಯಕಯೋಗಿ ಮುರಿಗೆಪ್ಪ  ಮಾಲಗಾರ ಅವರ ಮನೆಗೆ ಬೆಟ್ಟಿ ನೀಡಿ ಆವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ  ಸುವರ್ಣ ಕರ್ನಾಟಕ ಸಾಧಕ  ರಾಷ್ಟ್ರ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಿ ಅಯೋದ್ಯೆಯ ಪುರುಷೋತ್ತಮ ಶ್ರೀ ರಾಮನ ಪ್ರಸಾದ ನೀಡಿ ಶುಭ ಹಾರೈಸಿ ಮಾತನಾಡಿ  ಸಮಾಜದ ಬಡ ಜನರ ಹಿತಾಸಕ್ತಿ ಕಾಪಾಡಿ  ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತ,

ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಚಿಕ್ಕ ವಯಸಿನಲ್ಲಿಯೇ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪಡೆದುಕೊಂಡು ಹೆಸರು ವಾಸಿಯಾಗಿದ್ದಾರೆ ಬಸವಣ್ಣವರ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಹಗಲಿರುಳು ಕಾಯಕದಲ್ಲಿ ತೊಡಗಿ 

ಯಾ ವುದೇ  ದುಶ್ಚಟಕ್ಕೆ ಬಲಿಯಾಗದೆ ಕೆಟ್ಟವರ ಸಹವಾಸ ಮಾಡದೇ ನೇರ ನುಡಿಯುಳ್ಳ ಸಮಾಜಕ್ಕೆ ಸಹಾಯ ಮಾಡಬೇಕೆನ್ನುವ ಸಹೃದಯದಿಂದ ಸಮಾಜ ಸೇವೆ ರೂಪದಲ್ಲಿ ಕೊಡುಗೆ ನೀಡುತ್ತಿರುವ ಮುರಿಗೆಪ್ಪ ಮಾಲಗಾರ ಅವರ ಮನೆಯಲ್ಲಿ ಸನ್ಮಾನ ಸವಿ ನೆನಪಿನ ಕಾಣಿಕೆ ನೋಡಿ ಹರ್ಷ ವ್ಯಕ್ತ ಪಡಿಸಿ ಸಮಾಜದಲ್ಲಿನ ಈಗಿನ ಯುವ ಜನಾಂಗದವರಿಗೆ ಮಾದರಿಯಾಗಿದ್ದಾರೆ.ನಿಜಕ್ಕೂ ಇವರು ಮಾಡುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

Leave a Comment

Your email address will not be published. Required fields are marked *

error: Content is protected !!