ಅಥಣಿ ಪಟ್ಟಣಕ್ಕೆ ಏ. 3 ರಂದು ಜನಾರ್ಧನ ರೆಡ್ಡಿ ಆಗಮನ :ಬಿಸನಕೊಪ್ಪ

Share the Post Now

ಬೆಳಗಾವಿ. ಅಥಣಿ

ವರದಿ: ಸಿದ್ದರೂಡ ಬಣ್ಣದ

ಅಥಣಿ : ಹುಟ್ಟಿ ಬೆಳೆದು ಮತ್ತು ಪಿಎಸ್ ಐ ಆಗಿ ಅಥಣಿಯಲ್ಲಿ ಕಾರ್ಯನಿರ್ವಹಿಸಿದ ನಾನು ಜನತೆಯೊಂದಿಗೆ ನಿಕಟ ಒಡನಾಟ ಇಟ್ಟುಕೊಂಡಿದ್ದೆ. ನೌಕರಿ ಮಾಡಿ ಬಡ್ತಿ ಪಡೆದು ಐಶಾರಾಮವಾಗಿ ಜೀವನ ನಡೆಸಬಹುದಿತ್ತು. ಆದರೆ ರಾಜಕೀಯದ ಮೂಲಕ ಸಮಾಜ ಅಥವಾ ಜನ ಸೇವೆ ಮಾಡುವ ಉದ್ದೇಶ ಹೊಂದಿರುವ ಕಾರಣಕ್ಕೆ ನಾನು ಸಿಪಿಐ ಸ್ಥಾನಕ್ಕೆ ಕೊಟ್ಟಿದ್ದ ರಾಜೀನಾಮೆ ಅಂಗೀಕಾರವಾಗಿದೆ. ಅಂದಿನಿಂದ ಸಮಾಜ ಕಾರ್ಯಕ್ಕಾಗಿ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವೆ ಎಂದು ಮಾಜಿ ಸಿಪಿಐ ಬಸವರಾಜ ಬಿಸನಕೊಪ್ಪ ಅವರು ಹೇಳಿದರು.

ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ನನ್ನ ನೆಲೆ ಗುರುತಿಸಿಕೊಳ್ಳಲು ಮಾಜಿ ಸಚಿವ ಜನಾರ್ಧನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಥಣಿ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವೆ. ನಾನು ರಾಜೀನಾಮೆ ಕೊಟ್ಟ ನಂತರ ಅಥಣಿ ವಿಧಾನಸಭಾ ಕ್ಷೇತ್ರಾದ್ಯಂತ ಸುತ್ತಾಡಿ ಎಲ್ಲ ಧರ್ಮ, ಜಾತಿ, ಮೇಲು ಕೀಳು ಎನ್ನದೇಎಲ್ಲ ವರ್ಗದವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿರುವೆ. ಬರುವ ಸೋಮವಾರ ಏ.3 ರಂದು ಅಧ್ಯಕ್ಷರು ಅಥಣಿಗೆ ಆಗಮಿಸಲಿದ್ದು ಅಂದು ಸಾರ್ವಜನಿಕ ಸಭೆ ಹಾಗೂ ಬೃಹತ್ ರ್ಯಾಲಿ ಕೂಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದರು.

ಅನಂತರ ನ್ಯಾಯವಾದಿ ಮಿತೇಶ್ ಪಟ್ಟಣ ಮಾತನಾಡಿ, ಕಲ್ಯಾಣ ಪ್ರಗತಿ ಪಕ್ಷದ ಸಂಘಟನೆ ಬಲ ಪಡೆಸುವ ನಿಟ್ಟಿನಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅಥಣಿಗೆ ಆಗಮಿಸಲಿದ್ದಾರೆ ಎಂದ ಅವರು ಅವರ ಪ್ರವಾಸದ ನಂತರ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.

Leave a Comment

Your email address will not be published. Required fields are marked *

error: Content is protected !!