ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆ ಎಂದು ಮನನೊಂದ ಯುವತಿಯು ತೋಟದ ಮನೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಹೆಣ್ಣು ಕೇಳಿದರಂತೆ . ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ನ ಮನೆಯವರು ಹೇಳಿದ್ದರು.
ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳನ್ನು ಕೈ ಹಿಡಿದು ಎಳೆದಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅದೇ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಕೈ ಹಿಡಿದು ಎಳೆದಾಡಿದ್ದಾನೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.