ಹಳ್ಳೂರ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ರಿ ಮೂಡಲಗಿ ಇವರ ಆಶ್ರಯದಲ್ಲಿ ನಾಗನೂರು ಕಾರ್ಯಕ್ಷೇತ್ರದಲ್ಲಿ ಸುಸ್ಥಿರ ಕಬ್ಬಿಣ ಬೇಸಾಯದ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ರೈತರಾದ ಇವರು ಅಲ್ಲ ಗೌಡ ಪಾಟೀಲ್ ಇವರು ಕಬ್ಬಿನ ಸಸಿಗಳ ತಯಾರಿ ಬಗ್ಗೆ ಸಸಿ ನಾಟಿ ಮಾಡುವ ವಿಧಾನಗಳ ಬಗ್ಗೆ ಬಿಜೋ ಪಚಾರ ಮಾಡುವ ವಿಧಾನಗಳ ಬಗ್ಗೆ ರೋಗಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪ ಪೈಲಿ ಇವರು ಪ್ರಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಉಪಾಧ್ಯಕ್ಷರಾದ ಶಿವಲೀಲಾ ಸಬರದ, ಒಕ್ಕೂಟದ ಪದಾಧಿಕಾರಿಗಳಾದ ಲಕ್ಷ್ಮಿ ಮಾಯಣ್ಣವರ್ ಸ್ವ ಸಹಾಯ ಸಂಘಗಳ ಸದಸ್ಯರು ರೈತ ಬಾಂದವರು ಉಪಸ್ಥಿತರಿದ್ದರು ಸೇವಾ ಪ್ರತಿನಿಧಿಯಾದ ಮದಿನಾ ನಾಯಿಕವಾಡಿ ಕಾರ್ಯಕ್ರಮ ಸ್ವಾಗತಿಸಿದರು ,ಕವಿತಾ ದಿನ್ನಿಮನಿ. ನಿರೂಪಿಸಿದರು, ಲಕ್ಷ್ಮಿ ಆಸೀರೊಟ್ಟಿ. ವಂದಿಸಿದರು.