ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ, ಕಳ್ಳತನ ಮಾಡಿದವರನ್ನು ಬಂದಿಸಿ ಅವರಿಂದ ಇಲೇಕ್ಟಿಕಲ್ ಅಂಗಡಿ ಕಳ್ಳತನಕ್ಕೆ ಸಂಬಂದ ಪಟ್ಟ 45,000/- ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಡ ಗಾಡಿ ಹಿರೋ ಸ್ಟೇಂಡದ ಮೋಟಾರ ಸೈಕಲ ಸೆಂಟ್ರೋ ಕಂಪನಿಯ ಮೋಟಾರ ಸೈಕಲ ಮತ್ತು ಕಳ್ಳತನ ಮಾಡಿದ ಮೈಂಡಿಂಗ್ ವಾಯರ್ 10 ಬಂಡಲ್‌ಗಳನ್ನು , ಸುಟ್ಟ ಮೋಟಾರಗಳ ಸ್ಟ್ಯಾಪ್ ಮೈಂಡಿಂಗ್‌ವಾಯರ ಗಳನ್ನು ಹೀಗೆ ಒಟ್ಟು 3,85,000/- ರೂಪಾಯಿ ಕಿಮ್ಮತ್ತಿ ಮಾಲನ್ನು ವಶಪಡಿಸಿಕೊಂಡಿದಾರೆ
ಈ ಕಾರ್ಯಾಚರಣೆಯಲ್ಲಿ ರಾಮನಗೌಡ ಹಟ್ಟಿ ಡಿ.ಎಸ್.ಪಿ ರಾಮದುರ್ಗರವರ ಮಾರ್ಗದರ್ಶನದಲ್ಲಿ ಐ ಎಮ್ ಮಠಪತಿ ಪಿ.ಐ ಮುರಗೋಡ ಪೊಲೀಸ ಠಾಣಿ ಎಸ್. ಎಮ್, ಕಾರಜೋಳ, ಪಿಎಸ್‌ಐ ಮತ್ತು ಸಿಬ್ಬಂದಿ ಜನರಾದ ಎಮ್ ಚಿ ಸನ್ನಾಯಿಕ, ಎಸ್ ಎಮ್ ಹುಂಚ, ಐ. ಎಸ್. ವಕ್ಕುಂದ ಕೆ ಜ ಅಲಗರಾವುತ, ಎಮ್ ಎಸ್ ಅವರಾದಿ, ಕೆ ಆರ್ ಮುನವಳ್, ಎಮ್ ಆ ಗುಡಗನಟ್ಟ, ವಿ ಡಿ ಸಕ್ತಿ, ವಿ, ಕೆ ಮುರಗೋಡ ರವರುಗಳು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಗೆ ಎಸ್ ಪಿ ಬೆಳಗಾವಿ ಜಿಲ್ಲೆರವರು ಮತ್ತು ಹೆಚ್ಚುವರಿ ಎಸ್ ಪಿ ಬೆಳಗಾವಿ ಜಿಲ್ಲೆರವರು ಕಾರ್ಯ ವೈಖರಿ ಬಗ್ಗೆ ಪ್ರಶಂಸಿಸಿದ್ದಾರೆ.