ಸಾಧನೆಯಂದರೆ ಹೀಗಿರಬೇಕು!25 ನೇ ವಯಸ್ಸಿಗೆ ಹೈಕೋರ್ಟ್ ನ್ಯಾಯಾಧಿಶೆಯಾಗಿ ಆಯ್ಕೆ

Share the Post Now

ಕೋಲಾರ :ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಕಾರಹಳ್ಳಿ ಗ್ರಾಮದ ಬಡ ಕುಟುಂಬದ ನಾರಾಯಣಸ್ವಾಮಿ ವೆಂಕಟಲಕ್ಷೀ ಅವರ ಒಬ್ಬಳೇ ಒಬ್ಬಳು ಪುತ್ರಿ ಗಾಯಿತ್ರಿ ಎನ್ ಅವರು ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಮೂಲಕ ಜಿಲ್ಲೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

2021ರಲ್ಲಿ ಕಾನೂನು ಪದವಿ ಪಡೆದುಕೊಂಡ ಗಾಯತ್ರಿ ಎನ್ ಅವರು ನ್ಯಾಯಾಧಿಶೆ ಆಗುವ ಕಂಡ ಕನಸು ನನಸು ಮಾಡಿದ್ದಾಳೆ

ಸತತ ಉತ್ತಮ ವಿಧ್ಯಾಭ್ಯಾಸದ ಪ್ರಯತ್ನದಿಂದ ಕೇವಲ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ

ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿ ಬಡತನದ ಹಿನ್ನೆಲೆಯಲ್ಲಿ ಉತ್ತಮ ವಿಧ್ಯಾಭ್ಯಾಸ ಪಡೆದು ಕೆಜಿಎಫ್‌ ನ ಕೆಂಗಲ್ ಹನುಮಂತಯ್ಯ ವಕೀಲ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಗಾಯಿತ್ರಿ ಕರ್ನಾಟಕಕ್ಕೆ ನಾಲ್ಕನೆ‌ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಕರ್ನಾಟಕ ರಾಜ್ಯದ ಗಮನ ಸೆಳೆದಿದ್ದರು.
ಹೀಗೆ ಅವರ ಸಾಧನೆ ಇನ್ನಷ್ಟು ಉತ್ತುಂಗಕ್ಕೆರಲಿ ಎಂದು ಆಶೀಸೋಣ!

Leave a Comment

Your email address will not be published. Required fields are marked *

error: Content is protected !!