ಮುಗಳಖೋಡ: ರಾಜ್ಯದಲ್ಲಿ 2ನೆಯ ಬಾರಿಗೆ ಸಿಎಂ ಆಗಿ ಆಯ್ಕೆಯಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಾಗೂ ಸಾಯಂಕಾಲ ಪಟ್ಟಣದ ಬೀರಸಿದ್ದೇಶ್ವರ ದೆವಸ್ಥಾನದಿಂದ ವಿವೇಕಾನಂದ ವೃತದವರೆಗೆ ಸಿದ್ದರಾಮೈಯನವರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಬಂಡಾರ ಎರಚಿ, ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಮೇಶ ಯಡವನ್ನವರ, ರಾವಸಾಬ ಗೌವಲೆತೀನವರ, ವಿಠಲ ಯಡವನವರ, ಶ್ರೀಕಾಂತ ಖೇತಗೌಡರ, ಗಿರಮಲ ಮುಧೋಳ, ಆನಂದ ಯರಡೆತ್ತಿ ಸಹದೇವ ಮೆಕ್ಕಳಕ್ಕಿ, ಅಜ್ಜಪ್ಪ ಶಿಗುಣಸಿ, ವಿಠಲ ಕವಾಯಿ, ತೌಫಿಕ್ ಯಲಿಗಾರ, ವಿಠಲ ಮೆಕ್ಕಳಕಿ, ಸಂತೋಷ ಅರಬಾವಿ, ಮಾರುತಿ ಬಿಳಗಿ, ಕುಮಾರ ಮೆಕ್ಕಳಕಿ, ಮಾರುತಿ ಹಿಪ್ಪರಗಿ, ಅಜ್ಜಪ್ಪ ಹಳಿಂಗಳಿ, ಸಹದೇವ ಮೆಕ್ಕಳಕಿ ಹಾಗೂ ಸುಮಾರು ಕಾಂಗ್ರೆಸ್ ಕಾರ್ಯ ಕರ್ತರು ಬಾಗಿಯಾಗಿದ್ದರು.
ವರದಿ: ಸಂತೋಷ ಮುಗಳಿ





