ಮುಗಳಖೋಡ: ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ 162 ನೇ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಜ.12 ರವಿವಾರರಂದು ನಡೆದ ಆದರ್ಶ ಕ್ವಿಜ್ ಅವಾರ್ಡ್ಸ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಟ್ಟಣದ ಬಾ.ಸಿ.ಮಠಪತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ 5001/- ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಪಿ ಪಡೆದುಕೊಂಡಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಣಕೋಡಿ ತೋಟದ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ರೂ. 3001/- , ಹಾಗೂ ಹಾರೂಗೇರಿ ಪಟ್ಟಣದ ವಿಶ್ವ ಭಾರತೀ ಶಾಲೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ರೂ.2001/- , ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಸರಕಾರಿ ಶಾಲೆ ವಿದ್ಯಾರ್ಥಿಗಳು ಚತುರ್ಥ ಬಹುಮಾನ ರೂ.1001 ನಗದು,ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. 21 ಶಾಲೆಯ ವಿದ್ಯಾರ್ಥಿಗಳ ತಂಡ ಬಾಗವಹಿಸಿದ್ದವು
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಜಂಬಗಿ, ಎಂ ಎಸ್ ಸಾವಡಕರ, ಸದಾಶಿವ ಕೊಣ್ಣೂರ, ರವಿ ಹಳ್ಳೂರ, ವಿವೇಕ ಬಳಿಗಾರ, ಮಲ್ಲು ಯಡವಣ್ಣವರ, ಸತೀಶ ಹೊಸೂರ, ಗೀರಿಶ ತಳವಾರ, ಮಂಜು ಮುನ್ಯಾಳ, ಬಸವರಾಜ ಮುನ್ಯಾಳ, ರಮೇಶ ಹೊಸೂರ, ವ್ಯವಸ್ಥಾಪಕ ಅಶೋಕ ಕೊಣ್ಣೂರ, ಮುಖ್ಯ ಶಿಕ್ಷಕ ಅಜಯ ತೇರದಾಳ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಿಕ್ಷಕ ಮಹಾದೇವ ಕಡಹಟ್ಟಿ ಸ್ವಾಗತಿಸಿದರು, ವಿದ್ಯಾರ್ಥಿನಿ ಸುಪ್ರಿಯಾ ಯಡವಣ್ಣವರ ನಿರೂಪಿಸಿದರು.