ಹಣದಾಸೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆಯುವುದು ಅಡವಿ ಸಿದ್ದೇಶ್ವರ ಸ್ವಾಮೀಜಿ.

Share the Post Now

                                    ಹಳ್ಳೂರ.

ದೇವರ ಆಶೀರ್ವಾದ ವಿದ್ದರೆ ಏನೆಲ್ಲ ಪಡೆಯಬಹುದು.ಪುಣ್ಯದ ಸಾಮಾಜಿಕ ಕಾರ್ಯಮಾಡುವರ ಜೀವನ ಸುಖಮಯವಾಗುವುದು.ಸಮಾಜದಲ್ಲಿ ಪ್ರಾಮಾಣಿಕವಾಗಿ ಪತ್ರಿಕೆ ಮುಖಾಂತರ ಸುದ್ದಿ ಬಿತ್ತರಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಡವಿ ಸಿದ್ದರಾಮ ಮಹಾಸ್ವಾಮಿಗಳು  ಹೇಳಿದರು.       

                       ಅವರು ಶಿವಾಪೂರ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ನಡೆದ 9ನೇಯ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ನವರಾತ್ರಿ ಉತ್ಸವ ಆಚರಣೆ ಮಹತ್ವದ್ದು ಬನ್ನಿ ತಪ್ಪಲಿನಲ್ಲಿ ದೈವಿ ಶಕ್ತಿ ಅಡಗಿದೆ ಮಹಾನವರಾತ್ರಿ ವಿಶೇಷ ಹಬ್ಬವು 9 ದಿನ ದೀಪ ಹಚ್ಚಿ ನವರಾತ್ರಿ ಹಿಂದೂ ಧರ್ಮದಲ್ಲಿ ಆರಾದಿಸುವ ಪವಿತ್ರ ಹಬ್ಬವೆಂದು ಹೇಳಿದರು.                        

              ಕಾವ್ಯಾಶ್ರೀ ಅಮ್ಮನವರು ಸಾನಿಧ್ಯ ವಹಿಸಿ ಮಾತನಾಡಿ ನವರಾತ್ರಿ 9 ದಿನಗಳ ಕಾಲ 9 ದೇವಿಯ ಅವತಾರ  ತಾಳಿ ದುಷ್ಟರ ಸಂಹಾರ ಸಿಸ್ಟರ್ ಪರಿಪಾಲನೆ ಮಾಡುವರು 12 ಮಾಸಗಳಿರುತ್ತವೆ ಭಾದ್ರಪದ ಪಾಪ ಕರ್ಮ ಮಾಡುವರನ್ನು ನಾಶ ಮಾಡಲು ನವ ದುರ್ಗೆ ಅವತರಿಸಿ ಬಂದಿರುತ್ತಾರೆ. ತೊಟ್ಟಿಲು ತೂಗುವ ಕೈ ಜಗತ್ತು ತೂಗಬಹುದು ಇದ್ದಾಗ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕು.ಭಗವಂತನ ನಾಮಸ್ಮರಣೆ ಮನಸ್ಸಿಗೆ ಶಾಂತಿ ನೆಮ್ಮದಿ,ಸಕಲ ಸೌಭಾಗ್ಯ ದೊರೆತ್ತವೆ.ಮನೆ ಸ್ವಚ್ಛ ವಿದ್ದರೆ ಜನ ಬರ್ತಾರೆ ಮನಸ್ಸು ಸ್ವಚ್ಛ ವಿದ್ದರೆ ಭಗವಂತ ನೆಲೆಸುತ್ತಾನೆ. ಸಮಾಜ ಸೇವೆ ,ಗುರುವಿನ ಸೇವಾ ಮಾಡಿರಿ ನಿಷ್ಕಾಮ ಭಕ್ತಿ ದೇವರಿಗೆ ಸಲ್ಲಿಸುತ್ತದೆ. ಮನಸ್ಸು ಕ್ಷಣ ಕ್ಷಣಕ್ಕೂ ಬದಲಾಗುತ್ತದೆ.ಮಕ್ಕಳಿಗೇ ಸಂಸ್ಕಾರ ನೀಡಿದರೆ ವೃದ್ಧಾಶ್ರಮ ಕಡಿಮೆ ಆಗುತ್ತವೆ. ಚಿಂತೆ ಬಿಟ್ಟು ಚಿಂತನ ಮಾಡಿದರೆ ಒಳ್ಳೆಯದು ರೈತರ ಮಕ್ಕಳಿಗೇ ಹೆಣ್ಣು ಕೊಟ್ಟರೆ ಜೀವನ ಸುಖಮಯ ಎಲ್ಲರೂ ಹನೆಮೇಲೆ ಇಬುತಿ ದರಿಸಬೇಕು.

ಹೆಣ್ಮಕ್ಕಳು ಕೈ ತುಂಬ ಬಳೆ ಹಣೆಯಲ್ಲಿ ಕುಂಕುಮ ಮೈತುಂಬ ಸೀರೆ ಉಟ್ಟು ಭಾರತೀಯ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಶ್ರೀಮಂತಿಕೆ ಅಧಿಕಾರ ಯಾವುದೂ ಬೆನ್ನು ಹತ್ತಿ ಬರೋದಿಲ್ಲ ಕೊನೆಗೆ ಒಳ್ಳೇದು ಮಾಡಿದ್ದೂ ಮಾತ್ರ ಬೆನ್ನತ್ತಿ ಬರುತ್ತದೆಂದು ಹೇಳಿದರು.     ಅಥಿತಿಗಳಾಗಿ ಉಪಸ್ಥಿತರಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಹಾಗೂ  ಆಡಿ ಬಟ್ಟಿ ಗ್ರಾಮದ ಶರಣ ಸದ್ಬಕ್ತರಿಗೆ ಸನ್ಮಾನ ಮಾಡಿದರು.ಎನ್ ಜಿ ಹೆಬ್ಬಾಳ ಸ್ವಾಗತಿಸಿ ,ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!