ಮೂಡಲಗಿ . ತಹಶೀಲ್ದಾರ ಕಚೇರಿಯಲ್ಲಿ ಗುರುವಾರದಂದು ನಡೆದ ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಹಾಗೂ ಕಂದಾಯ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಜರುಗಿತು.ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಅದ್ಯಕ್ಷರಾಗಿ ಸಂಜು ಅಗ್ನೆಪ್ಪಗೋಳ. ಉಪಾಧ್ಯಕ್ಷರಾಗಿ ಭಾರತಿ ಕಾಳಿ. ಗೌರವ ಅಧ್ಯಕ್ಷರಾಗಿ ಅಮೀನ್ ಲಾಡಕಾನ್. ಪ್ರಧಾನ ಕಾರ್ಯದರ್ಶಿಯಾಗಿ ಸಚಿನ ಕೊನ್ನೂರ. ಕಜಾಂಚಿಯಾಗಿ ಕೇದಾರಲಿಂಗ ಬಾಸಗಿ. ಆವರು ಆಯ್ಕೆಯಾಗಿದ್ದಾರೆ.
ಮುಂದುವರೆದು ಮೂಡಲಗಿ ತಾಲೂಕಿನ ಕಂದಾಯ ನೌಕರ ಸಂಘದ ಅಧ್ಯಕ್ಷರಾಗಿ ತಾಲೂಕಾ ಶಿರಸ್ತೇದಾರ್ ಪರಸಪ್ಪ ನಾಯಿಕ.ಉಪಾಧ್ಯಕ್ಷರಾಗಿ ಮಾರುತಿ ಶಿಗಿಹೊಳಿ. ಪ್ರಧಾನ ಕಾರ್ಯದರ್ಶಿಯಾಗಿ ಕರಿಷ್ಮಾ ನದಾಫ. ಕಜಾಂಚಿಯಾಗಿ ಮಹಾಂತೇಶ ಕರಿಗಾರ ಅವರು ಅವಿರೋಧಾಗಿ ಆಯ್ಕೆಯಾದರು.
ಸದರಿ ಚುನಾವಣೆಯು ತಹಶೀಲ್ದಾರರಾದ ಮಹಾದೇವ ಸನಮೂರಿ ಅವರ ಮಾರ್ಗದರ್ಶನದಲ್ಲಿ ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ ಇವರ ನೇತೃ ತ್ವದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಚುಣಾವಣೆ ಜರುಗಿತು.ಅವಿರೋಧವಾಗಿ ಆಯ್ಕೆಯಾದ ಎಲ್ಲ ಅಧಿಕಾರಿಗಳಿಗೆ ತಹಶೀಲ್ದಾರ ಅವರು ಅಭಿನಂದನೆ ಸಲ್ಲಿಸಿದರು. ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಸಂಗಣ್ಣ ಹೊಸಮನಿ. ಕಚೇರಿಯ ಸಿಬ್ಬಂದಿಗಳು ಹಾಗೂ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿದ್ದರು.