ಐನಾಪೂರ ಶ್ರೀ ಸಿದ್ದೇಶ್ವರ ಜಾತ್ರೆಯ ಪೂರ್ವಭಾವಿ ಸಭೆ

Share the Post Now

ಬೆಳಗಾವಿ, ಕಾಗವಾಡ

ವರದಿ :ಸಚಿನ ಕಾಂಬಳೆ


ಕಾಗವಾಡ:ಐನಾಪೂರ ಶ್ರೀ ಸಿದ್ದೇಶ್ವರ ಜಾತ್ರೆಯು ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎತ್ತುಗಳ ಹಾಗೂ ಕುದುರೆ ಷರ್ಯತ್ತುಗಳು ಇರುವುದರಿಂದ ಪ್ರಾಣಿ ಹಿಂಸೆ ಆಗದಂತೆ ಜಾತ್ರಾ ಕಮೀಟಿಯವರು ನಿಗಾವಹಿಸಬೇಕೆಂದು ಅಥಣಿಯ ಸಿ,ಪಿ,ಆಯ್, ರವೀಂದ್ರ ನಾಯ್ಕೋಡಿ ತಿಳಿಸಿದರು.

ಅವರು ಶನಿವಾರದಂರಂದು ಐನಾಪೂರ ಶ್ರೀ ಸಿದ್ದೇಶ್ವರ ಆವರಣದಲ್ಲಿ ಜಾತ್ರಾ ಮಹೋತ್ಸದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿತ್ತಾ ಜಾತ್ರೆ ನಡೆಸಲು ಹಾಗೂ ಶರ್ಯತ್ತುಗಳನ್ನು ನಡೆಸಲು ಸರಕಾರದ ನಿಯಮಗಳು ನಿರ್ಬಂದಗಳು ಇರುತ್ತವೆ. ಷರ್ಯತ್ತುಗಳನ್ನು ಭಾಗವಹಿಸಿದ ದನಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಬೇಕು.ದನಗಳಿಗೆ ಬಡಿಗೆಗಳಿಂದ ಬಡಿಯುವದು ಬ್ಯಾಟಿರಿಯಿಂದ ಕರೆಂಟ ಹಚ್ಚುವದು, ಛತ್ರಿಯಿಂದ ಹುಚ್ಚುವದು , ಕಾರದ ಪುಡಿ ಹಾಕುವುದು, ಷೇರೆ ಕುಡಿಸುವುದು. ಈ ರೀತಿ ಅನೇಕ ಪ್ರಾಣಿ ಹಿಂಸೆ ಆಗದಂತೆ ನೋಡಿಕೊಳ್ಳುವುದು. ಜಾತ್ರಾ ಕಮೀಟಿಯವರ ಕರ್ತವ್ಯವಾಗಿದೆ ಎಂದರು. ರಾಜ್ಯದಲ್ಲಿ ೨ನೇ ಅತೀ ದೊಡ್ಡ ಬೃಹತ ಕೃಷಿಮೇಳ ಇರುವುದರಿಂದ ಜನದಟ್ಟನೆ ಆಗುವುದ ಸಹಜ ಆದ್ದರಿಂದ ಜಾತ್ರಾ ಕಮೀಟಿಯವರೊಂದಿಗೆ ನಮ್ಮ ಇಲಾಖೆ ಸಹಕರಿಸುತ್ತದೆ ಎಂದರು.

ಕಾಗವಾಡ ತಾಲೂಕಾ ದಂಡಾಧಿಕಾರಿ ರಾಜೇಶ ಬುರ್ಲಿ ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ಜಾತ್ರೆ ನಡೆದಿಲ್ಲ. ಈ ಸಲ ಅದ್ದೂರಿಯಾಗಿ ಜಾತ್ರೆ ನಡೆಸೋಣ ಆದರೆ ಶಿಸ್ತುಬದ್ಧವಾಗಿ ಸರಕಾರ ನಿಯಮಗಳನ್ನು ಪಾಲಿಸಿ ಅಚ್ಚುಕಟ್ಟಾಗಿ ಜಾತ್ರೆ ನಡೆಸೋಣ ಅಲ್ಲಲ್ಲಿ ಸಿ.ಸಿ. ಕ್ಯಾಮಾರಗಳನ್ನು ಅಳವಡಿಸಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನಿಗಾ ವಹಿಸಬೇಕು ಎಂದರು.

ಕಾಗವಾಡ ಪಿ.ಎಸ್.ಆಯ್. ಹನುಮಂತ ನೆರಳೆ ಮಾತನಾಡಿ, ಈ ಜಾತ್ರೆ ಬೃಹತ್ ಪ್ರಮಾಣ ಜಾತ್ರೆ ಇರುವುದರಿಂದ ಜಾತ್ರಗಳಲ್ಲಿನ ಅಂಗಡಿಗಳನ್ನು ವ್ಯವಸ್ಥಿವಾಗಿ ಜನದಟ್ಟನೆ ಆಗದಂತೆ ನೋಡಿಕೊಳ್ಳುವುದಲ್ಲದೆ, ಜನ ದಟ್ಟಣೆ ಇರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಹೋಗುವಂತಾ ಕಬ್ಬಿನ ಟ್ಯಾಕ್ಟರಗಳಿಗೆ ಸರಿಯಾಗಿ ದಾರಿ ಮಾಡಿಕೊಡಬೇಕು. ದೇವಸ್ಥಾನ ಬಳಿ ಹಾಗೂ ಅಂಗಡಿಗಳ ಸುತ್ತಮುತ್ತ ಕಿಸೆಗಳ್ಳರಿಂದ ಎಚ್ಚರಿಕೆ ವಹಿಸಬೇಕು ಎಂದರು.

ವೇದಿಕೆ ಮೇಲೆ ಪಟ್ಟಣ ಪಂಚಾಯತ ಸದಸ್ಯರಾದ ಅರುಣ ಗಾಣಿಗೇರ, ಸಂಜು ಬಿರಡಿ ,ಸುರೇಶ ಅಡಿಸೇರಿ , ಹರ್ಷವರ್ಧನ ಪಾಟೀಲ, ಗುರು ಮಡಿವಾಳ, ಅಮಗೌಂಡ ಒಡೆಯರ ,ಪ್ರಕಾಶ ಪುಟಾಣಿ, ಸಿದ್ದು ಒಡೆಯರ,ಸಂಜು ಕುಸನಾಳೆ, ಧರೆಪ್ಪಾ ಹರಳೆ, ವಿಜಯ ಹರಳೆ, ಸೇರಿದಂತೆ ಅನೇಕರು ಉಪಸ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!